ಚಿಕ್ಕಬಳ್ಳಾಪುರ: ಉಡಾಫೆಯ ಮಾತುಗಳು, ದ್ವೇಷದ ಬಾಣಗಳು ನನಗೆ ಕಮಲದ ಹೂವಾಗಿ, ಹೂಮಾಲೆಯಾಗಿ ನನ್ನ ಕೊರಳಿಗೆ ಬೀಳುತ್ತಿದೆ ಎಂದು ಸಂಸದ ಕೆ.ಸುಧಾಕರ್ (K.Sudhakar) ಹೇಳಿದ್ದಾರೆ.
ನಗರದಲ್ಲಿ ಚುನಾವಣೆ ಬಳಿಕ ಮಾತನಾಡಿದ ಅವರು, ಮಾನ್ಯ ಪ್ರದೀಪ್ ಈಶ್ವರ್ (Pradeep Eshwar) ಅವರಿಗೆ ನಾನು ಅಭಾರಿಯಾಗಿದ್ದೇನೆ. ಅವರ ಉಡಾಫೆಯ ಮಾತುಗಳು, ಈ ರೀತಿಯ ದ್ವೇಷದ ಬಾಣಗಳು ನನಗೆ ಕಮಲದ ಹೂಮಾಲೆಯಾಗಿ ನನ್ನ ಕೊರಳಿಗೆ ಬೀಳುತ್ತಿದೆ. ಅವರ ನಡವಳಿಕೆ ಇದೇ ರೀತಿ ಮುಂದುವರೆಯಲಿ. ಅವರ ಮಾತುಗಳು ಹೀಗೆ ಮುಂದುವರೆಯುತ್ತಿರಲಿ ಎಂದು ವ್ಯಂಗ್ಯವಾಡಿದರು.ಇದನ್ನೂ ಓದಿ: ನಮಗೆ ಯಾರ ತುಷ್ಟೀಕರಣ ಅಗತ್ಯ ಇಲ್ಲ, ಮಾಡುವುದೂ ಇಲ್ಲ: ದಿನೇಶ್ ಗುಂಡೂರಾವ್
ಕಳೆದ ರಾತ್ರಿ ಏರ್ಪೋರ್ಟ್ನಲ್ಲಿ ನಮ್ಮ ಸದಸ್ಯರ ಹೈಜಾಕ್‌ಗೆ ಪ್ಲಾನ್ ಮಾಡಿದ್ದರು. ರಾಜ್ಯಪಾಲರು, ಕಮಿಷನರ್, ಕೇಂದ್ರ ಗೃಹಸಚಿವರ ಮೊರೆ ಹೋಗಬೇಕಾಯಿತು. ಅಂತಿಮವಾಗಿ ಜಯ ಸಿಕ್ಕಿದೆ. ಜನರು ಬಯಸಿದ್ದು ಆಗಿದೆ ಎಂದು ಚಿಕ್ಕಬಳ್ಳಾಪುರ ಕಳೆದ 16 ತಿಂಗಳಲ್ಲಿ ಅಭಿವೃದ್ಧಿ ಕಂಡಿಲ್ಲ. ಗುಂಡಿ ಮುಚ್ಚೋ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ನಗರೋತ್ಥಾನ ನಾವು ತಂದ ಹಣದಲ್ಲಿ ಮಾಡಿದ್ದ ಟೆಂಡರ್ ರದ್ದು ಮಾಡಿದ್ದರು. ಈ ಶಾಸಕರ ನೇತೃತ್ವದಲ್ಲಿ ಅಭಿವೃದ್ಧಿ ಶೂನ್ಯ ಆಗಿದೆ. ಶಾಸಕರಿಗೆ ಅಭಿವೃದ್ಧಿ ಗೊತ್ತಿಲ್ಲ ಅಭಿವೃದ್ಧಿ ಮಾಡುವ ಬದ್ಧತೆ ಇಲ್ಲ. ಚಿಕ್ಕಬಳ್ಳಾಪುರ ಸುಂದರ ಸುರಕ್ಷಿತ ನಗರ ಆಗಬೇಕು. ಹೈಕೋರ್ಟ್ ಮಧ್ಯಂತರ ಆದೇಶದ ಪ್ರಕಾರ ಫಲಿತಾಂಶ ತಡೆ ಹಿಡಿಯಲಾಗಿದೆ. ಎಂಎಲ್‌ಸಿಗಳು ಈ ಫಲಿತಾಂಶಕ್ಕೆ ಬರಬೇಕಿತ್ತಾ..? ರಾಜಕಾರಣದ ಗಂಧ ಗಾಳಿ ಗೊತ್ತಿಲ್ಲದವರ ಮಾತು ಕೇಳಿ ಬಂದಿದ್ದರೆ ಹೀಗೆ ಆಗುತ್ತದೆ ಎಂದರು.
ಇನ್ನೂ ಮೂರು ವರ್ಷ ಇದೆ. ಅವರು ಏನೆಲ್ಲಾ ಮಾಡಬೇಕು ಎಂದುಕೊಂಡಿದ್ದಾರೆ. ಅದನ್ನೆಲ್ಲಾ ಇದೇ ಮೂರು ವರ್ಷದಲ್ಲಿಯೇ ಮಾಡಲಿ. ಅವರ ಮಾತು, ನಡೆ ಮೂರು ವರ್ಷಗಳ ಕಾಲ ಹೀಗೆ ಇರಲಿ. ಅವರು ಆಡುವ ಡ್ಯಾನ್ಸ್ ಕೂಡ ಹೀಗೆ ಇರಲಿ. ಇನ್ನಷ್ಟೂ ಹೆಚ್ಚು ಕಲಿತು ಬಂದು ಮಾಡಲಿ ಎಂದು ಅಪೇಕ್ಷೆ ಮಾಡುತ್ತೇನೆ. ಮೂರು ವರ್ಷವಾದ ಮೇಲೆ ರಾಜ್ಯದಲ್ಲಿ ಅಲ್ಲ, ದೇಶದಲ್ಲಿಯೂ ನಿಮಗೆ ಅವಕಾಶ ಸಿಗುವುದಿಲ್ಲ. ಇದನ್ನೂ ಬರೆದಿಟ್ಟುಕೊಳ್ಳಿ ಎಂದು ಟಾಂಗ್ ಕೊಟ್ಟರು.ಇದನ್ನೂ ಓದಿ: ಮೀಸಲಾತಿ ರದ್ದು ಹೇಳಿಕೆ ವಿವಾದ – ರಾಹುಲ್ ಗಾಂಧಿ ಪರ ನಿಂತ ಸಿಎಂ