ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಮುಂಬೈನಲ್ಲಿರುವ ಶಿವಸೇನೆಯ ನಾಯಕ ಸಂಜಯ್ ರಾವತ್ ಅವರ ಮನೆಯ ಹೊರಗೆ ಬುಧವಾರ ಬ್ಯಾನರ್ ಒಂದು ಕಾಣಿಸಿಕೊಂಡಿದೆ. ಬ್ಯಾನರ್‌ನಲ್ಲಿ, ನಿನ್ನ ದುರಹಂಕಾರ ಇನ್ನು ನಾಲ್ಕೇ ದಿನ, ನಮ್ಮ ರಾಜಕೀಯ ಬರಲಿದೆ ಎಂದು ಬರೆಯಲಾಗಿದೆ.
ಈ ಪೋಸ್ಟರ್‌ನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಾಳಾಸಾಹೇಬ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವತ್ ಹಾಗೂ ಇತರ ಪ್ರಮುಖರ ನಾಯಕರ ಫೊಟೋಗಳಿವೆ. ಈ ಬ್ಯಾನರ್ ಅನ್ನು ಶಿವಸೇನೆಯ ಕಾರ್ಪೊರೇಟರ್ ದೀಪಮಲಾ ಬಾಧೆ ಹಾಕಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಯ BJP ಅಭ್ಯರ್ಥಿ ದ್ರೌಪದಿ ಮುರ್ಮುಗೆ ʼZ’ ಭದ್ರತೆ
Advertisement
Advertisement
ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ(ಎಂವಿಎ) ಮೈತ್ರಿ ಸರ್ಕಾರಕ್ಕೆ ಇದೀಗ ಸಂಕಷ್ಟ ಬಂದಿದ್ದು, ಈ ಹಿನ್ನೆಲೆ ನಿನ್ನೆಯಿಂದ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸಂಜಯ್ ರಾವತ್ ಟ್ವೀಟ್ ಮಾಡಿ, ವಿಧಾನಸಭೆ ವಿಸರ್ಜನೆಯತ್ತ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಪಯಣ ಎಂದು ಬರೆದಿದ್ದಾರೆ. ಈ ಮೂಲಕ ಶಾಸಕಾಂಗ ಸಭೆಯನ್ನು ವಿಸರ್ಜಿಸುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನ ಮಾಲೀಕತ್ವ ನಮ್ಮದಲ್ಲ – ಉಲ್ಟಾ ಹೊಡೆದ BBMP
Advertisement
ಇದರ ಮಧ್ಯೆಯೇ ರಾಜ್ಯಪಾಲ ಭಗತ್ ಸಿಂಗ್ ಹಾಗೂ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮಹಾರಾಷ್ಟ್ರದ ಸರ್ಕಾರ ಮುಂದುವರೆಯುತ್ತಾ ಅಥವಾ ಪತನಗೊಳ್ಳುತ್ತಾ ಎಂಬ ಪ್ರಶ್ನೆಗಳಿಗೆ ಶೀಘ್ರವೇ ಉತ್ತರ ಸಿಗಲಿದೆ.