-ಮೈಸೂರಲ್ಲಿ ಪ್ರವಾಹ ಪರಿಸ್ಥಿತಿ
ಮೈಸೂರು: ಭಾರೀ ಮಳೆಗೆ ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ನದಿಗೆ ಇಳಿಯದಂತೆ ಅಧಿಕಾರಿಗಳು ಹಾಗೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಯ ಬಳಿಕವೂ ನೀರಿನಲ್ಲಿ ಈಜಾಡುವ ಮೂಲಕ ಯುವಕನೊಬ್ಬ ದುಸ್ಸಾಹಸ ಮಾಡಿದ್ದಾನೆ.
ಉಕ್ಕಿ ಹರಿಯುತ್ತಿರುವ ನಂಜನಗೂಡಿನ ಸೇತುವೆ ಬಳಿ ಕಪಿಲಾ ನದಿಗೆ ಜಿಗಿದು ಯುವಕನೊಬ್ಬ ಈಜಾಡಿದ್ದು, ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ವೃದ್ಧರೊಬ್ಬರು ನಂಜನಗೂಡಿನ ಮಲ್ಲನಮೂಲೆ ಮಠದ ಬಳಿ ನದಿಗೆ ಧುಮುಕಿ ಈಜಾಡಿದ್ದಾರೆ.
ಈಗಾಗಲೇ ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಪೊಲೀಸರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ವೃದ್ಧ ಯಾವುದೇ ಎಚ್ಚರಿಕೆಗೂ ಮುಲಾಜು ನೀಡದೆ ಈಜಾಡಿದ್ದಾರೆ. ಬೆಳಗ್ಗೆ ಅಷ್ಟೇ ಇದೇ ಸ್ಥಳದಲ್ಲಿ ಇಬ್ಬರು ಯುವಕರು ಸೆಲ್ಫಿ ತೆಗೆದುಕೊಳ್ಳಲು ರೈಲ್ವೇ ಸೇತುವೆ ನಿಷೇಧಿತ ಪ್ರದೇಶಕ್ಕೆ ತೆರಳಿದ್ದರು. ಈ ಕುರಿತು ಸಹ ಮುನ್ನೇಚ್ಚರಿಕೆ ನೀಡಲಾಗಿತ್ತು.
ಕಳೆದ ಕೆಲ ದಿನಗಳ ಹಿಂದೆ ನದಿಗೆ ನೀರು ಬಿಟ್ಟಿದ ವೇಳೆಯೂ ಕಪಿಲಾ ನದಿಯಲ್ಲಿ ಈಜಾಲು ತೆರಳಿದ್ದ ವೇಳೆ ಯುವನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕಳೆದ ಒಂದು ತಿಂಗಳ ಅವಧಿಯಲ್ಲಿ ಕಪಿಲಾ ನದಿಯಲ್ಲಿ 3 ಮೂವರು ಯುವಕು ನೀರು ಪಾಲಾಗಿದ್ದರು ಈ ಘಟನೆ ಮಾಸುವ ಮುನ್ನವೇ ಯುವಕರು ದುಸ್ಸಾಹಸ ತೋರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews