ಬ್ರುಸೆಲ್ಸ್: 19 ವರ್ಷದ ಝಾರಾ ರುದರ್‌ಫೋರ್ಡ್ ವಿಶ್ವದಾದ್ಯಂತ ಏಕಾಂಗಿಯಾಗಿ ವಿಮಾನ ಹಾರಾಟ ನಡೆಸಿದ ಅತ್ಯಂತ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬ್ರಿಟಿಷ್-ಬೆಲ್ಜಿಯಂ ಮೂಲದ ಝಾರಾ 5 ತಿಂಗಳುಗಳ ಹಿಂದೆ ಮೈಕ್ರೋಲೈಟ್ ವಿಮಾನದಲ್ಲಿ ಏಕಾಂಗಿಯಾಗಿ ಹಾರಾಟ ಪ್ರಾರಂಭಿಸಿದ್ದರು. ಪ್ರಪಂಚದಾದ್ಯಂತ 5 ಖಂಡಗಳನ್ನು ಒಂಟಿಯಾಗಿ ಸುತ್ತುಹಾಕಿದ ಅತ್ಯಂತ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೂ ಝಾರಾ ಪಾತ್ರರಾಗಿದ್ದಾರೆ. ಇದನ್ನೂ ಓದಿ: 50 ವರ್ಷಗಳಿಂದ ಬೆಳಗುತ್ತಿದ್ದ ಅಮರ್ ಜವಾನ್ ಜ್ಯೋತಿ ಇನ್ಮುಂದೆ ಇಂಡಿಯಾ ಗೇಟ್‌ನಲ್ಲಿ ಬೆಳಗಲ್ಲ!
Advertisement
Advertisement
ಝಾರಾ ಕಳೆದ ವರ್ಷ ಆಗಸ್ಟ್ 18ರಂದು ಮೈಕೊಲೈಟ್ ವಿಮಾನದಲ್ಲಿ ಪ್ರಯಾಣವನ್ನು ಪ್ರಾರಂಭಿಸಿದ್ದರು. ಒಟ್ಟು 51 ಸಾವಿರ ಕಿ.ಮೀ. ವರೆಗೆ ಒಬ್ಬಂಟಿಯಾಗಿ ಝಾರಾ ವಿಮಾನದಲ್ಲಿ ಹಾರಾಟ ನಡೆಸಿ, ಗುರುವಾರ ಬೆಲ್ಜಿಯಂನ ಕೋರ್ಟಿಜ್ಕ್-ವೆವೆಲ್ಗೆಮ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇದನ್ನೂ ಓದಿ: ಸಂರಕ್ಷಿತ ಸಮುದ್ರ ಜೀವಿಗಳು ಮರಳಿ ಕಡಲಿಗೆ – ಮೀನುಗಾರರಿಗೆ 40 ಲಕ್ಷ ರೂ. ಪರಿಹಾರ
Advertisement
Advertisement
2017ರಲ್ಲಿ ಅಫ್ಘಾನ್ ಮೂಲದ ಅಮೇರಿಕಾ ಪ್ರಜೆ ಶಾಸ್ತಾ ವೈಸ್ ತಮ್ಮ 30ನೇ ವಯಸ್ಸಿನಲ್ಲಿ ಪ್ರಪಂಚದಾದ್ಯಂತ ಏಕಾಂಗಿಯಾಗಿ ವಿಮಾನದಲ್ಲಿ ಹಾರಾಟ ಮಾಡಿ ದಾಖಲೆ ಬರೆದಿದ್ದರು. ಇದೀಗ ಝಾರಾ ರುದರ್ಫೋರ್ಡ್ ಈ ದಾಖಲೆಯನ್ನು ಮುರಿದಿದ್ದಾರೆ. ಅತ್ಯಂತ ಕಿರಿಯ ಪುರುಷರ ದಾಖಲೆ ಅಮೆರಿಕ ಮೂಲ ಮೇಸನ್ ಆಂಡ್ರ್ಯೂಸ್ ಅವರ ಹೆಸರಿನಲ್ಲಿದೆ. ಇವರು 2018ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ದಾಖಲೆ ಬರೆದಿದ್ದರು.