ಕೋಲಾರ: ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು ಪ್ರೀತಿಸಿ ಮದುವೆಯಾದ ಹಿನ್ನೆಲೆ ಪ್ರೀತಿಯನ್ನ ಒಪ್ಪದ ಯುವತಿ ಮನೆಯವರು ಯುವಕನ ಮನೆ ಧ್ವಂಸ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
Advertisement
ಕೋಲಾರ ತಾಲೂಕಿನ ವೇಮಗಲ್‍ನಲ್ಲಿ ಈ ಘಟನೆ ನಡೆದಿದ್ದು, ವೇಮಗಲ್ ಗ್ರಾಮದ ಮುನಿರಾಜು ಹಾಗೂ ಸಿಂಧು ಪ್ರೀತಿಸಿ ಮದುವೆಯಾದ ದಂಪತಿ. ಪ್ರೀತಿಯಿಂದ ಸಾಕಿ ಸಲುಹಿದ ಮಗಳನ್ನ ಪ್ರೀತಿಸಿದ ಯುವಕ ಬೇರೆಡೆ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ. ಈ ವಿಚಾರ ತಿಳಿದ ಯುವತಿಯ ಪೋಷಕರು ವೇಮಗಲ್‍ನಲ್ಲಿನ ಮುನಿರಾಜು ಮನೆಯನ್ನ ಧ್ವಂಸ ಮಾಡಿ ಬೆಂಕಿ ಹಾಕಿದ್ದಾರೆ.
Advertisement
Advertisement
ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಗೃಹ ಬಳಕೆ ವಸ್ತುಗಳು ಸೇರಿ ನಗನಾಣ್ಯ ಬೆಂಕಿಗಾಹುತಿಯಾಗಿದ್ದು, ಮನೆಯನ್ನ ಧ್ವಂಸ ಮಾಡಿ ಬೆಂಕಿ ಹಚ್ಚಿ ಯುವಕನ ತಂದೆ ಹಾಗೂ ಅತ್ತಿಗೆ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವಕ ಮುನಿರಾಜು ಹಾಗೂ ಯುವತಿ ಸಿಂಧು ಒಂದೇ ಜಾತಿಯಾಗಿದ್ರು, ಪೋಷಕರನ್ನ ಒಪ್ಪಿಸಿ ಮದುವೆಯಾಗುವಲ್ಲಿ ವಿಫಲರಾಗಿದ್ದಾರೆ. ಇದನ್ನೂ ಓದಿ: ಮುತಾಲಿಕ್ ಕೆಲವು ರಾಜಕಾರಣಿಗಳ ಏಜೆಂಟ್: ರಿಜ್ವಾನ್ ಅರ್ಷಾದ್ ಕಿಡಿ
Advertisement
ಇನ್ನೂ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯುವತಿ ಸಿಂಧು ದೂರು ನೀಡಿದ್ದಾಳೆ. ಇನ್ನೂ ತಮ್ಮ ಪೋಷಕರ ವಿರುದ್ದವೇ ದೂರು ಸಲ್ಲಿಸಿದ ಯುವತಿ ಸಿಂಧು ನಮಗೆ ರಕ್ಷಣೆ ನೀಡುವಂತೆ ವ್ಯಾಟ್ಸಾಪ್ ಮೂಲಕ ಪತ್ರ ರವಾನೆ ಮಾಡಿದ್ದಾಳೆ.