ಬೆಂಗಳೂರು: ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಯುವತಿಯರಿಗೆ ಕಿರುಕುಳ ಕೊಡುತ್ತಿದ್ದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರಮೇಶ್ ಎಂದು ಗುರುತಿಸಲಾಗಿದೆ. ಆರೋಪಿ ಹೋಮ್‌ಗಾರ್ಡ್ ಅಗಿದ್ದು, ಪೊಲೀಸ್ ಅಧಿಕಾರಿಯಂತೆ ಯುವತಿಯರ ರೂಮ್‍ಗೆ ರಾತ್ರಿ ವೇಳೆ ನುಗ್ಗುತ್ತಿದ್ದ. ಅಲ್ಲದೇ ಯುವತಿಯರ ಬಳಿ ಅಶ್ಲೀಲವಾಗಿ ಮಾತನಾಡಿ ಕಿರುಕುಳ ಕೊಡುತ್ತಿದ್ದ. ಇದನ್ನೂ ಓದಿ: ಆಕಸ್ಮಿಕ ಬೆಂಕಿ – 40 ಕುರಿಗಳು ಸಜೀವ ದಹನ
Advertisement
ಕೇರಳದಿಂದ ಬೆಂಗಳೂರಿಗೆ (Bengaluru) ಬಂದು ಕಾಲೇಜೊಂದರಲ್ಲಿ 2ನೇ ವರ್ಷದ ಬಿಎಸ್‍ಸಿ ಓದುತ್ತಿದ್ದ ವಿದ್ಯಾರ್ಥಿನಿ ಮೂವರು ಸ್ನೇಹಿತೆಯರ ಜೊತೆ ರೂಮ್ ಮಾಡಿಕೊಂಡಿದ್ದಳು. ಜ.25ರಂದು ಊಟ ಮಾಡಿ ಮಲಗಿದ್ದಾಗ ಆರೋಪಿ ಬಾಗಿಲು ತಟ್ಟಿದ್ದ. ಬಾಗಿಲು ತೆಗೆದಾಗ ನಾನು ಪೊಲೀಸ್ ಅಂತ ಹೇಳಿ ಒಳಗಡೆ ಹೋಗಿದ್ದ.
Advertisement
Advertisement
ಆತ ಒಳಗೆ ಬರುತ್ತಿದ್ದಂತೆ ಯುವತಿ ಆಕೆಯ ಸ್ನೇಹಿತನಿಗೆ ಕರೆ ಮಾಡಿ ಪೊಲೀಸರು ಬಂದಿದ್ದಾರೆ ಎಂದು ತಿಳಿಸಿದ್ದಳು. ಆರೋಪಿ ಡೋರ್ ಲಾಕ್ ಮಾಡಿ, ಎಲ್ಲರ ಮೊಬೈಲ್‍ನ್ನು ಹೆದರಿಸಿ ಕಸಿದುಕೊಂಡಿದ್ದ. ಬಳಿಕ ಯುವತಿ ಕೈಯಲ್ಲಿದ್ದ ಹಾವಿನ ಟ್ಯಾಟೋ ನೋಡಿ ಅಶ್ಲಿಲವಾಗಿ ಮಾತನಾಡಿದ್ದ. ಅಲ್ಲದೇ ಯುವತಿ ಕರೆ ಮಾಡಿದ್ದಕ್ಕೆ ಬಂದಿದ್ದ ಆಕೆಯ ಸ್ನೇಹಿತರ ಮೊಬೈಲ್ ವಶಕ್ಕೆ ಪಡೆದು, ಯುವತಿರಿಗೆ ಮಂಡಿಕಾಲಿನಲ್ಲಿ ನಿಲ್ಲಿಸಿ ಟಾರ್ಚರ್ ನೀಡಿದ್ದ. 1:30 ಸುಮಾರಿಗೆ ಇನ್ನೊಬ್ಬ ಯುವಕ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಸ್ಥಳಕ್ಕೆ ಸದಾಶಿವನಗರ (Sadashiva Nagar) ಠಾಣೆ ಪೊಲೀಸರು ಬರುತ್ತಿದ್ದಂತೆ ವ್ಯಕ್ತಿಯ ಬಣ್ಣ ಬಯಲಾಗಿದೆ.
Advertisement
ಆರೋಪಿ ಕಳೆದ 6 ತಿಂಗಳಿನಿಂದ ಕ್ರೈಂ ಬ್ರಾಂಚ್ ಪೊಲೀಸ್ ಅಂತ ಹೇಳಿಕೊಂಡು ಯುವತಿಯರಿಗೆ ಹಾಗೂ ಆಕೆ ಗೆಳೆಯರಿಗೆ ಟಾರ್ಚರ್ ಕೊಡುತ್ತಿದ್ದ. ಈ ಸಂಬಂಧ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ರಮೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾರ್ ಡೋರ್‌ಗೆ ಬೈಕ್ ಡಿಕ್ಕಿ – ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್!