ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮತಾಂತರದ ಹಾವಳಿ ಹೆಚ್ಚಾಗಿದ್ದು, ಕಳೆದ ತಿಂಗಳಿಂದೀಚೆಗೆ ಉಡುಪಿ, ಕಾಪು, ಕಾರ್ಕಳ ತಾಲೂಕಿನಲ್ಲಿ ಮತಾಂತರ ಮಾಡುವ ಸದಸ್ಯರಿಗೂ ಹಿಂದು ಸಂಘಟನೆಯ ಸದಸ್ಯರ ನಡುವೆ ತಿಕ್ಕಾಟ ಜೋರಾಗಿದೆ.
ಗ್ರಾಮೀಣ ಪ್ರದೇಶದ ಕುಟುಂಬಗಳೇ ಇವರ ಟಾರ್ಗೆಟ್ ಆಗಿದ್ದು, ಮತಾಂತರಕ್ಕೆ ಪ್ರಚೋದಿಸುತ್ತಿದ್ದ ಇಬ್ಬರು ಯುವತಿಯರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಾರ್ಕಳದ ಮಾವಿನಕಟ್ಟೆ ಎಂಬಲ್ಲಿ ನಡೆದಿದೆ.
Advertisement
Advertisement
ಆರ್ಥಿಕವಾಗಿ ಹಿಂದುಳಿದ ಬಡವರ್ಗಗಳನ್ನು ಟಾರ್ಗೆಟ್ ಮಾಡಿಕೊಂಡು ಇಬ್ಬರು ಯುವತಿಯರು ಆಮಿಷಗಳನ್ನು ಒಡ್ಡಿ ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ಪ್ರಚೋದಿಸುತ್ತಿದ್ದರು ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ದೂರಿದ್ದಾರೆ. ವಿಷಯ ತಿಳಿದ ಹಿಂದೂ ಸಂಘಟನೆಯ ಸದಸ್ಯರು ಇಬ್ಬರು ಮಹಿಳೆಯರನ್ನು ತರಾಟೆಗೆ ತೆದುಕೊಂಡಿದ್ದು, ಈ ವೇಳೆ ಅವರ ಬಳಿ ಮತಾಂತರಕ್ಕೆ ಬಳಸುವ ಪ್ರಚೋದನಕಾರಿ ಕರಪತ್ರಗಳು ಪತ್ತೆಯಾಗಿವೆ.
Advertisement
Advertisement
ಹಿಂದೂ ಸಂಘಟನೆಯ ಸದಸ್ಯರನ್ನು ಮತಾಂತರ ಮಾಡಿಸಿ, ನಮ್ಮೆಲ್ಲ ಸಾಲ ತೀರಿಸಿ, ತಲಾ ಮೂರು ಲಕ್ಷ ರೂ. ಕೊಡಿ ಎಂದು ಮಹಿಳೆಯರನ್ನು ಹಿಂದೂ ಸಂಘಟನೆಯ ಯುವಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಮದುವೆಯಾಗದ ಹಲವು ಯುವಕರಿದ್ದಾರೆ ಅವರಿಗೆ ಒಳ್ಳೆಯ ಹುಡುಗಿ ನೋಡಿ ಮದುವೆ ಮಾಡುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಪರಸ್ಪರ ವಾಗ್ದಾಳಿ ನಡೆದಿದೆ. ಇಷ್ಟಾಗುತ್ತಿದ್ದಂತೆ ಇಬ್ಬರು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂತಹ ಪ್ರಕರಣಗಳಿಗೆ ಕೂಡಲೇ ಕಡಿವಾಣ ಹಾಕಬೇಕು. ಕಳೆದ ಒಂದೆರಡು ತಿಂಗಳಿಂದ ಮತಾಂತರ ಪ್ರಕ್ರಿಯೆ ಜಾಸ್ತಿಯಾಗಿದೆ ಎಂದು ಕಾರ್ಕಳದ ಭಜರಂಗದಳದ ಕಾರ್ಯಕರ್ತರು ದೂರಿದ್ದಾರೆ.