ಆನೇಕಲ್: 18 ದಿನಗಳ ಹಿಂದೆ ಮದುವೆ ಆಗಿದ್ದ ಯುವತಿ (Newly Married Woman) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಆನೇಕಲ್ (Anekal) ತಾಲೂಕಿನ ಸರ್ಜಾಪುರದಲ್ಲಿ (Sarjapura) ನಡೆದಿದೆ.
ರಿಹಾನ (24) ಮೃತ ದುರ್ದೈವಿ. ಸರ್ಜಾಪುರ ಪಟ್ಟಣದಲ್ಲಿ ಘಟನೆ ನಡೆದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆಯಾಗಿದೆ. ಡೆಂಕಣಿಕೋಟೆ ಸಮೀಪದ ಕಲಕಂಡರಹಳ್ಳಿಯ ನಿವಾಸಿ ರಿಹಾನ ಸರ್ಜಾಪುರದಲ್ಲಿ ಗಂಡ ಹಾಗೂ ಅತ್ತೆ ಜೊತೆ ವಾಸವಿದ್ದರು. ಇದನ್ನೂ ಓದಿ: ಮದ್ದೂರು ಶಾಸಕ ಉದಯ್ ಮನೆಯಲ್ಲೇ ಗನ್‌ಮ್ಯಾನ್ ಮೇಲೆ ಹಲ್ಲೆ ನಡೆಸಿತ್ತು ದರ್ಶನ್ ಗ್ಯಾಂಗ್!
ರಿಹಾನ ಗಂಡ ಸಬಾಶ್ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಲಾಗಿದೆ. ಮೃತ ರಿಹಾನ ಗಂಡ ಶಬಾಸ್ ಕೊಲೆ ಮಾಡಿ ನೇಣು ಹಾಕಿದ್ದಾನೆಂದು ಆರೋಪ ಮಾಡಲಾಗಿದೆ. ಈ ಕುರಿತು ಸರ್ಜಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ನೀಟ್ ಪರೀಕ್ಷೆ ಹಿಂದಿನ ದಿನ ನನಗೆ ಪ್ರಶ್ನೆ ಪತ್ರಿಕೆ ಸಿಕ್ಕಿತ್ತು: ಪೊಲೀಸರ ಬಳಿ ತಪ್ಪೊಪ್ಪಿಕೊಂಡ ಬಂಧಿತ ವಿದ್ಯಾರ್ಥಿ