ಧಾರವಾಡ/ಬ್ರೆಜಿಲ್: ಯುವತಿಯೊಬ್ಬಳು ಕಿವಿ ಕೇಳಿಸದಿದ್ರೂ ಬ್ರೆಜಿಲ್‍ನ ಟೆಕ್ವಾಂಡೋದಲ್ಲಿ ಭಾರತಕ್ಕೆ 4ನೇ ಸ್ಥಾನ ತಂದುಕೊಟ್ಟಿದ್ದಾಳೆ.
ಸಾಧನೆ ಮಾಡಿದ ಯುವತಿ ಹೆಸರು ನಿಧಿ ಸುಲಾಖೆ. ಧಾರವಾಡದ ಸರ್ಕಾರಿ ಕಾಲೇಜಿನಲ್ಲಿ ಬಿಕಾಂ ಮಾಡುತ್ತಿರುವ ನಿಧಿಗೆ ಶ್ರವಣದೋಷವಿದೆ. ಈ ಸಮಸ್ಯೆ ಇವಳ ಸಾಧನೆಗೆ ಎಂದೂ ಅಡ್ಡಿಯಾಗಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬ್ರೆಜಿಲ್‍ನಲ್ಲಿ ನಡೆದ ಟೆಕ್ವಾಂಡೋದಲ್ಲಿ ಈಗ ಈಕೆ ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡಿದ್ದಾಳೆ.
ಅಲ್ಲದೇ ನಿಧಿಗೆ ‘ನನಗೆ ಕಿವಿ ಕೇಳಿಸಲ್ಲ’ ಎಂಬ ಭಾವನೆ ಸಹ ಇಲ್ಲ. ಸಾಧನೆ ಮಾಡಬೇಕು ಎಂಬ ಛಲ ಮಾತ್ರ ಇವಳಲ್ಲಿದೆ. ಧಾರವಾಡ ದಾನೇಶ್ವರಿನಗರದ ನಿಧಿ ಹುಟ್ಟಿದಾಗಿನಿಂದ ಶ್ರವಣದೋಷದ ಸಮಸ್ಯೆ ಎದುರಿಸುತ್ತಿದ್ದಾಳೆ. ಇವರ ಪೋಷಕರಿಗೆ ಈ ಮಗು ಬಗ್ಗೆ ಸಾಕಷ್ಟು ಜನ ಬೇರೆ ರೀತಿ ಮಾತನಾಡಿದ್ರು, ತಂದೆಗೆ ಮಾತ್ರ ಮಗಳನ್ನು ಸಾಧಕಿ ಮಾಡಬೇಕು ಎಂಬ ಛಲವಿತ್ತು.
ನಿಧಿ ಅಥ್ಲೆಟಿಕ್ಸ್‌ನಲ್ಲಿ ಮುಂದೆ ಬರಬೇಕು ಎಂದು ಕೋಚಿಂಗ್ ಕೊಡಿಸಿದ್ದಾರೆ. ಅದೇ ರೀತಿ ಆಕೆ 100 ಹಾಗೂ 200 ಮೀಟರ್ ಓಟದಲ್ಲಿ ಮೆಡಲ್ ಸಹ ತಂದಿದ್ದಳು. ಅಲ್ಲದೇ ಜಾವೆಲಿನ್ ಥ್ರೋನಲ್ಲಿ ಕೂಡಾ ಎತ್ತಿದ ಕೈ. ನಿಧಿ ತಂದೆ ಆಕೆಯ ಸುರಕ್ಷತೆಯನ್ನು ಆಕೆಯೇ ನೋಡಿಕೊಳ್ಳಬೇಕು ಎಂದು ಟೆಕ್ವಾಂಡೋಗೆ ಸೇರಿಸಿದರು. ಕಳೆದ ತಿಂಗಳು ಬ್ರೆಜಿಲ್‍ನಲ್ಲಿ ಶ್ರವಣದೋಷ ಉಳ್ಳವರ ಒಲಂಪಿಕ್ ಇತ್ತು.
ನಿಧಿ 67 ಕಿಲೋ ವಿಭಾಗದಲ್ಲಿ ಭಾಗವಹಿಸಿದ್ದು, ಭಾರತವನ್ನು ಪ್ರತಿನಿಧಿಸಿದ್ದಳು. ಈ ಮೂಲಕ ನಾಲ್ಕನೇ ಸ್ಥಾನ ಗಿಟ್ಟಿಸಿದ್ದಾಳೆ. ಅಲ್ಲದೇ ಇತ್ತೀಚೆಗೆ ಬ್ರೇಜಿಲ್‍ನಲ್ಲಿ ಮಾರ್ಷಲ್ ಆರ್ಟನ ಟೆಕ್ವಾಂಡೋದಲ್ಲಿ ನಿಧಿ ಭಾರತಕ್ಕೆ ನಾಲ್ಕನೇ ಸ್ಥಾನ ತಂದು ಕೊಟ್ಟಿದ್ದಾಳೆ. ಮೊದಲ ಸ್ಥಾನದಲ್ಲಿ ಟರ್ಕಿ, ಮೆಕ್ಸೊಕೋ ಎರಡನೇ ಸ್ಥಾನದಲ್ಲಿದೆ. ಒಟ್ಟು 70 ರಾಷ್ಟ್ರ ಈ ಕ್ರೀಡೆಯಲ್ಲಿ ಭಾಗವಹಿಸಿದ್ದವು. ಇದನ್ನೂ ಓದಿ: 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ: ಮುತಾಲಿಕ್
ಈ ಸಾಧನೆಗೆ ಸರ್ಕಾರಿ ಕಾಲೇಜ್ ಕೂಡಾ ಹೆಮ್ಮೆಪಟ್ಟಿದೆ. ಅಲ್ಲದೇ ಈ ಹಿಂದೆ ನಿಧಿ ಮಾಡಿದ ಎಲ್ಲ ಸಾಧನೆಗಳನ್ನ ಕೂಡಾ ಇವರ ಗಮನಕ್ಕೆ ಇತ್ತು. ಇದೇ ಕ್ರೀಡಾ ಕೋಟಾದಲ್ಲಿ ನಿಧಿ ಸರ್ಕಾರಿ ಕಾಲೇಜ್ ಪ್ರವೇಶ ಕೂಡಾ ಪಡೆದಿದ್ದಾಳೆ. ಇವಳಿಗೆ ಸರ್ಕಾರದಿಂದ ಸಹಾಯ ಸಿಕ್ಕರೆ, ಆಕೆ ಉಚಿತ ಕೋಚಿಂಗ್ ಪಡೆದು ಇನ್ನೂ ದೊಡ್ಡ ಸಾಧನೆ ಮಾಡಬಲ್ಲಳು ಎಂಬುದು ಕೂಡಾ ಇಲ್ಲಿಯ ಶಿಕ್ಷಕಿಯರ ಆಶಯವಾಗಿದೆ.
ಒಟ್ಟಿನಲ್ಲಿ ತಂದೆ ಕನಸನ್ನು ನನಸು ಮಾಡಲು ನಿಧಿಗೆ ಯಾವುದೇ ಶ್ರವಣದೋಷದ ಅಡ್ಡಿ ಬಂದಿಲ್ಲ. ಅಲ್ಲದೇ ಇಡೀ ಜಗತ್ತಿಗೆ ನಿಧಿ ನಮ್ಮ ಭಾರತ ಏನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ. ನಿಧಿ ಈ ಸಾಧನೆ ಮಾಡಿ ಬಂದ ಮೇಲೆ ಪ್ರಧಾನಿ ಮೋದಿ ಕೂಡಾ ಶ್ಲಾಘಿಸಿದ್ದಾರೆ. ಇವರ ಜೊತೆ ಮೋದಿ ಫೋಟೋ ತೆಗೆಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.