ರಾತ್ರಿ ಕಾಣೆಯಾಗಿದ್ದಾಳೆಂದು ದೂರು- ಬೆಳಗ್ಗೆ ಯುವತಿ ಶವವಾಗಿ ಪತ್ತೆ

Public TV
1 Min Read
MAHADEVAPURA MURDER CASE

ಬೆಂಗಳೂರು: ರಾತ್ರಿ ಕಾಣೆಯಾಗಿದ್ದಾಳೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬೆಳಗ್ಗೆದ್ದು ನೋಡುವಾಗ ಮನೆ ಮುಂದೆಯೇ ಯುವತಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಯುವತಿಯನ್ನು ಮಹಾನಂದ (21) ಎಂದು ಗುರುತಿಸಲಾಗಿದೆ. ಕಲಬುರಗಿ ಮೂಲದವಳಾದ ಈಕೆ ಪೆಟ್ರೋಲ್ ಬಂಕ್‍ನಲ್ಲಿ (Petrol Bunk) ಕೆಲಸ ಮಾಡುತ್ತಿದ್ದಳು. ಈ ಘಟನೆ ಮಹದೇವಪುರದ ಲಕ್ಷ್ಮಿ ಸಾಗರ ಲೇಔಟ್ ನಲ್ಲಿ ನಡೆದಿದ್ದು, ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು (Mahadevapura Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

MAHADEVAPURA

ಸೀನ್ ಆಫ್ ಕ್ರೈಮ್ ಪರಿಶೀಲಿಸುತ್ತಿರುವ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿದ್ದು, ವಿಷವುಣಿಸಿ ಕೊಲೆ ಮಾಡಿ ತಂದು ದುಷ್ಕರ್ಮಿಗಳು ಮನೆ ಮುಂದೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮರ್ಡರ್ ಆಗಿರೋದು ಕನ್ಫರ್ಮ್ ಆಗಿದೆ. ಇದನ್ನೂ ಓದಿ: ಇನ್ಸ್ಟಾದಿಂದ ಅತಿ ಹೆಚ್ಚು ಹಣ – ಜಸ್ಟ್ 1 ಪೋಸ್ಟ್‌ಗೆ ಕೊಹ್ಲಿಗೆ ಸಿಗುತ್ತೆ ಕೋಟಿ ಕೋಟಿ

ಈ ಸಂಬಂಧ ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ದುಷ್ಕರ್ಮಿಗಳು ಮಹಾನಂದಳನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕತ್ತಿನ ಭಾಗದಲ್ಲಿ ಗುರುತು ಪತ್ತೆಯಾಗಿದೆ. ಕಲಬುರಗಿ ಮೂಲದ ಅಕ್ಕ-ತಂಗಿ ಇಬ್ಬರೂ ಶೆಲ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಮಹಾನಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದಳು.

ರಾತ್ರಿ ಅಡುಗೆ ಮಾಡೋದಕ್ಕೆ ಅಂತಾ ಅಕ್ಕಿ ಸ್ಟೌ ಮೇಲೆ ಇಟ್ಟು ಮನೆಯಿಂದ ಹೊರಹೋಗಿದ್ದ ಮಹಾನಂದ ಕಾಣೆಯಾಗಿದ್ದಳು. ರಾತ್ರಿಯಾದರೂ ಮನೆಗೆ ತಂಗಿ ಬಾರದ ಹಿನ್ನೆಲೆಯಲ್ಲಿ ಮಹಾನಂದ ಸಹೋದರಿ ಪೊಲೀಸರಿಗೆ ದೂರು ನೀಡಿದರು. ಇತ್ತ ಇಂದು ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಮನೆ ಬಳಿ ಮಹಾನಂದಳ ಮೃತದೇಹ ತಂದು ಎಸೆದು ಹೋಗ್ಲಾಗಿತ್ತು.

ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Web Stories

Share This Article