– ಯುವಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಚಿತ್ರದುರ್ಗ: ಚಳ್ಳಕೆರೆಯಲ್ಲಿ (Challakere) ವಿಕೃತಕಾಮಿಯೊಬ್ಬನ ಕಾಟಕ್ಕೆ ಮಹಿಳೆಯರು ರೋಸಿ ಹೋಗಿದ್ದಾರೆ. ಯುವಕ ತ್ಯಾಗರಾಜ ನಗರದ ನಡುರಸ್ತೆಯಲ್ಲೇ ಬೆತ್ತಲಾಗಿ ಓಡಾಟ ಮಾಡಿ ಯುವತಿಯರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ.
ಯುವತಿಯೊಬ್ಬಳು ಮನೆಯಿಂದ ರಸ್ತೆಗೆ ಇಳಿದಿದ್ದು, ಈ ವೇಳೆ ಯುವಕ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆತಂಕಕ್ಕೊಳಗಾದ ಯುವತಿ ಮನೆಯೊಳಗೆ ಓಡಿ ಹೋಗಿದ್ದಾಳೆ. ಯುವಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅತ್ತೆ, ಮಾವನ ಕಿರುಕುಳಕ್ಕೆ ಮಹಿಳೆ ಬಲಿ – ಆಸ್ಪತ್ರೆಯಲ್ಲಿ ಶವ ಬಿಟ್ಟು ಪರಾರಿಯಾದ ಪತಿ ಕುಟುಂಬಸ್ಥರು
ಯುವಕನ ಈ ವರ್ತನೆಯಿಂದ ಮಹಿಳೆಯರು ಹಾಗೂ ಯುವತಿಯರಲ್ಲಿ ಆತಂಕ ಹೆಚ್ಚಾಗಿದೆ. ಅಲ್ಲದೇ ಓಡಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಬರ್ತ್‌ಡೇ ಆಚರಿಸಲು ಬಂದ ಸ್ನೇಹಿತರಿಂದ್ಲೇ ಡೆತ್ ಡೇ – ಪಾರ್ಟಿಯ ಬಿಲ್ ಕಟ್ಟೋ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ
 


 
		 
		 
		 
		 
		
 
		 
		 
		 
		