ಚಂಡೀಗಢ: ತನ್ನ ಪ್ರಿಯಕರನನ್ನು ಭೇಟಿಗೆ ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ್ದ ಯುವತಿಯನ್ನು ಗಡಿಯಲ್ಲಿ ಪಂಜಾಬ್ ಪೊಲೀಸರು ತಡೆದ ಘಟನೆ ನಡೆದಿದೆ.
ಫಿಜಾ ಖಾನ್ (24) ಪಾಕಿಸ್ತಾನಕ್ಕೆ ತೆರಳಲು ಯತ್ನಿಸಿದ ಯುವತಿ. ಈಕೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಖಾಸಗಿ ಶಾಲೆಯೊಂದರ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಿಂದ ಫಿಜಾ ಖಾನ್ ನಾಪತ್ತೆ ಆಗಿದ್ದಾಳೆ ಎಂದು ಅವಳ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು.
Advertisement
Advertisement
ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಆಕೆ ಪಾಕಿಸ್ತಾನದ ದಿಲ್ಶಾಸ್ ಎಂಬ ವ್ಯಕ್ತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸಿ ಆತನನ್ನು ಪ್ರೀತಿಸುತ್ತಿದ್ದಾಳೆ. ನಂತರ ಆಕೆ ಆತನನ್ನು ಮದುವೆಯಾಗಲು ಪಾಸ್‍ಪೋರ್ಟ್ ಸಹ ಮಾಡಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ 30 ದಿನಗಳ ವಿಸಾವನ್ನು ಪಡೆದಿದ್ದಾಳೆ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಾಲಕನನ್ನು ಅಪಹರಿಸಿ 1 ಲಕ್ಷಕ್ಕೆ ಮಾರಿದ್ರು – ನರ್ಸ್ ಜೊತೆ ಪತಿ ಕೈಗೂ ಕೋಳ
Advertisement
Advertisement
ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಪಂಜಾಬ್ ಪೊಲೀಸರನ್ನು ಸಂಪರ್ಕಿಸಿ ಆಕೆಯನ್ನು ಗಡಿಯಲ್ಲಿ ತಡೆದಿದ್ದಾರೆ. ನಂತರ ಆಕೆಯನ್ನು ಅಮೃತಸರದ ನಾರಿನಿಕೇತನದಲ್ಲಿ ಇರಿಸಿದ್ದ ಪಂಜಾಬ್ ಪೊಲೀಸರು ಮಧ್ಯಪ್ರದೇಶದ ಪೊಲೀಸರಿಗೆ ಹಸ್ತಾಂತರಿಸಿದರು. ನಂತರ ಅವಳನ್ನು ಕರೆದುಕೊಂಡು ಹೋಗಲು ಬಂದ ಕುಟುಂಬ ಸದಸ್ಯರೊಂದಿಗೆ ಹಸ್ತಾಂತರಿಸಲಾಯಿತು. ಇದನ್ನೂ ಓದಿ: ದೇವರಿಗಾಗಿ ದೇವರಿಂದ್ಲೇ ಹುಡುಕಾಟ- ಹುತ್ತದಲ್ಲಿ ಸಿಕ್ಕೇ ಬಿಡ್ತು 200 ವರ್ಷದ ಹಿಂದಿನ ವಿಗ್ರಹ