ತೆಹ್ರಾನ್: ಹಿಜಬ್ (Hijab) ಧರಿಸಿಲ್ಲ ಎಂದು ಬಂಧನಕ್ಕೊಳಗಾಗಿದ್ದ ಇರಾನಿ ಯುವತಿಯೊಬ್ಬರು (Iran Young Women) ಸಾವನ್ನಪ್ಪಿರುವ ಘಟನೆ ತೆಹ್ರಾನ್‌ನಲ್ಲಿ ನಡೆದಿದೆ.
ಮಹ್ಸಾ ಆಮಿನಿ (22) ಮೃತಪಟ್ಟ ಯುವತಿ. ಈಕೆ ತನ್ನ ಕುಟುಂಬದೊಂದಿಗೆ ಇರಾನ್ ರಾಜಧಾನಿಗೆ ಭೇಟಿ ನೀಡಿದ್ದರು. ಹಿಜಬ್ ಧರಿಸದೇ ಇದ್ದ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ನೈತಿಕ ಪೊಲೀಸ್ ಘಟಕದವರು ಯುವತಿಯನ್ನು ಬಂಧಿಸಿದ್ದರು. ಇದನ್ನೂ ಓದಿ: ಟ್ರಕ್ – ಬಸ್ ನಡುವೆ ಭೀಕರ ಅಪಘಾತ – 6 ಸಾವು, 20 ಮಂದಿಗೆ ಗಾಯ
Advertisement
Advertisement
ಬಂಧನದಿಂದ ಶಾಕ್‌ಗೆ ಒಳಗಾದ ಯುವತಿ ಕೋಮಾ ಸ್ಥಿತಿ ತಲುಪಿದ್ದಾಳೆ. ದುರದೃಷ್ಟವಶಾತ್, ನಂತರ ಆಕೆ ಮೃತಪಟ್ಟಿದ್ದಾಳೆ. ಯುವತಿ ಮೃತದೇಹವನ್ನು ವೈದ್ಯಕೀಯ ಪರೀಕ್ಷಾ ವಿಭಾಗಕ್ಕೆ ರವಾನಿಸಲಾಗಿದೆ.
Advertisement
ಸಾರ್ವಜನಿಕವಾಗಿ ಕಡ್ಡಾಯವಾಗಿ ಮಹಿಳೆಯರು ಹಿಜಬ್ (ಶಿರವಸ್ತ್ರ) ಧರಿಸುವುದು ಇಸ್ಲಾಮಿಕ್ ಗಣರಾಜ್ಯದಲ್ಲಿ ಕಡ್ಡಾಯ. ಇಲ್ಲಿ ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಕೂಡ ಇದೆ. ಇದನ್ನೂ ಓದಿ: ಮಕ್ಕಳಲ್ಲಿ ವಿಪರೀತ ಜ್ವರ – ಸೆ.25 ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಪುದುಚೇರಿ ಸರ್ಕಾರ
Advertisement
ಆಕೆಯನ್ನು ಪೊಲೀಸ್ ಠಾಣೆಗೆ ಕರೆತರುವ ಮತ್ತು ಆಸ್ಪತ್ರೆಗೆ ಸಾಗಿಸುವ ನಡುವೆ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಆಕೆಯ ತಲೆಗೆ ಪೆಟ್ಟು ಬಿದ್ದಿತ್ತು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಯುವತಿ ಸಾವಿನ ಬಗ್ಗೆ ಕುಟುಂಬಸ್ಥರು ಹಾಗೂ ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವತಿಯನ್ನು ದಾಖಲಿಸಿದ್ದ ಆಸ್ಪತ್ರೆ ಹೊರಗಡೆ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಅಲ್ಲದೇ ಆಡಳಿತ ವಿರೋಧಿ ಘೋಷಣೆಗಳನ್ನು ಕೂಗಿದರು. ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.