ಬೆಲ್ಟ್ ಕಟ್ ಆಗಿ ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು

Public TV
1 Min Read
Vijayapura Death

ವಿಜಯಪುರ: ಸೊಂಟಕ್ಕೆ ಕಟ್ಟಿದ್ದ ಬೆಲ್ಟ್ ಕಟ್ ಆಗಿ ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನವಭಾಗ್ ರಸ್ತೆಯ ಫಿಶ್ ಟನಲ್ ಎಕ್ಸ್ಪೋದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತ ಯುವತಿಯನ್ನು ನಿಖಿತಾ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ‘ಕಸ್ಟಡಿ’ಯಲ್ಲಿ ಭೀಮ ಖ್ಯಾತಿಯ ನಟಿ ಪ್ರಿಯಾ

ಅ.20ರಂದು ಸಾಯಂಕಾಲ ಫಿಶ್ ಟನಲ್ ಎಕ್ಸ್ಪೋದಲ್ಲಿರುವ ರೇಂಜರ್ ಸ್ವಿಂಗ್‌ನಲ್ಲಿ ನಿಖಿತಾ ಕುಳಿತಿದ್ದರು. ಮೂವರು ಯುವತಿಯರು ಒಟ್ಟಿಗೆ ಕುಳಿತಿದ್ದು, ಅದರಲ್ಲಿ ನಿಖಿತಾಳ ಸೊಂಟಕ್ಕೆ ಕಟ್ಟಿದ್ದ ಬೆಲ್ಟ್ ಕಟ್ಟಾಗಿ ಕೆಳಗೆ ಬಿದ್ದಿದ್ದಾಳೆ. ತಲೆ ಕೆಳಗಾಗಿ ಬಿದ್ದ ಪರಿಣಾಮ ತ್ರೀವವಾಗಿ ಗಾಯಗೊಂಡಿದ್ದರು. ತಕ್ಷಣ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು (ಅ.22) ಯುವತಿ ಮೃತಪಟ್ಟಿದ್ದಾಳೆ.

ಇನ್ನೂ ಈ ಘಟನೆಯ ವಿಡಿಯೋ ಪೋಷಕರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ತಲೆ ಕೆಳಗಾಗಿ ಬಿದ್ದಿರುವುದು ತಿಳಿದು ಬಂದಿದೆ. ಗಾಂಧಿಚೌಕ್  ಪೊಲೀಸ್ ಠಾಣೆಯಲ್ಲಿ (Gandhi Chowk Police Station) ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ನನ್ನ ಪತ್ನಿ ಟ್ರಾನ್ಸ್‌ಜೆಂಡರ್‌ – ಲಿಂಗತ್ವ ಪರೀಕ್ಷೆಗೆ ಅನುಮತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಪತಿ

Share This Article