ಬೆಂಗಳೂರು: ನಗರದ ಇತಿಹಾಸ ಪ್ರಸಿದ್ಧ ದೊಡ್ಡ ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾದಲ್ಲಿ ರೋಗಿಗಳ ನರಕಯಾತನೆ ಮುಂದುವರಿದಿದೆ.
ಜಾಂಡೀಸ್‍ನಿಂದ ಬಳಲುತ್ತಿದ್ದ 26 ವರ್ಷದ ಯುವತಿಗೆ ಆಪರೇಷನ್ ಮಾಡ್ಬೇಕು ಅಂತ ಮೂರ್ನಾಲ್ಕು ದಿನ ಚಿಕಿತ್ಸೆಯನ್ನ ವೈದ್ಯರು ಕೊಟ್ಟಿದ್ದಾರೆ. ಆದ್ರೆ, ಎರಡು ದಿನಗಳ ಹಿಂದೆ ಯುವತಿ ಸಾವನ್ನಪ್ಪಿದ್ದಾಳೆ. ಇದ್ರಿಂದ ಆಕ್ರೋಶಿತರಾದ ಯುವತಿಯ ಪೋಷಕರು ವಿಕ್ಟೋರಿಯಾ ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ.
Advertisement
ಸರ್ಕಾರಿ ಆಸ್ಪತ್ರೆಯಾದ್ರೂ ಹೊರಗಿನಿಂದಲೇ ಔಷಧಿ ತರಬೇಕಿದೆ. ಸರಿಯಾಗಿ ಟ್ರೀಟ್‍ಮೆಂಟ್ ಕೊಡ್ತಿಲ್ಲ. ಎಮರ್ಜೆನ್ಸಿ ವಾರ್ಡಿನಲ್ಲಿರುವ ರೋಗಿಯನ್ನ ಡಿಸ್ಚಾರ್ಜ್ ಮಾಡಿ ಕರೆದುಕೊಂಡು ಹೋಗಿ. ಅವ್ರು ಸತ್ರೆ ನಮ್ಮನ್ನ ಕೇಳಬಾರದು ಅಂತ ಡಾಕ್ಟರ್ ಹೇಳ್ತಾರೆ ಅಂತ ದೂರಿದ್ರು.
Advertisement
ಹೆಸರಿಗಷ್ಟೇ ಇದು ಸರ್ಕಾರಿ ಆಸ್ಪತ್ರೆ. ನಡೆಯೋದು ಬರೀ ದುಡ್ಡಿನ ದಂಧೆ. ದುಡ್ಡಿಲ್ಲ ಅಂದ್ರೇ ಡಾಕ್ಟರ್ ನಿಂದ ಕಾಂಪೌಂಡರ್ ವರೆಗೂ ತುಚ್ಛವಾಗಿ ಕಾಣ್ತಾರೆ. ಅಂತ ಕಲಬುರ್ಗಿಯಿಂದ ಬಂದಿರೋ ವ್ಯಕ್ತಿಯೊಬ್ಬರು ದೂರಿದ್ದಾರೆ.