ಧಾರವಾಡ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ತಮ್ಮ ಖಾಸಗಿ ವೀಡಿಯೋಗಳನ್ನು ತೋರಿಸುವ ಮೂಲಕ ಜನರನ್ನು ಮರುಳು ಮಾಡಿ, ಅವರಿಂದ ಹಣ ಕಿತ್ತುಕೊಳ್ಳುವ ಜಾಲ ಹಬ್ಬುತ್ತಲೇ ಇದೆ. ಈಗ ಅದೇ ರೀತಿ ಯುವತಿಯೊಬ್ಬಳು ವೀಡಿಯೋ ಕಾಲ್ (Video Call) ಮುಖಾಂತರ ನಿವೃತ್ತ ಪ್ರೊಫೆಸರ್ (Retired Professor) ಒಬ್ಬರಿಗೆ ತನ್ನ ಖಾಸಗಿ ವೀಡಿಯೋ (Obscene Video) ತೋರಿಸಿ ದೊಡ್ಡ ಮೊಸವನ್ನೇ (Fraud) ಮಾಡಿದ್ದಾಳೆ.
ಧಾರವಾಡದಲ್ಲಿ (Dharwad) ಇರುವ ನಿವೃತ್ತ ಪ್ರೊಫೆಸರ್ ಒಬ್ಬರಿಗೆ ಬರೋಬ್ಬರಿ 21 ಲಕ್ಷ ರೂ. ಹಣವನ್ನು ಉಂಡೆ ನಾಮ ಹಾಕಿರುವ ಯುವತಿ, ತನ್ನ ಸಹೋದರಿ ಮದುವೆಗೆ ಹಣ ಬೇಕು ಎಂದು ಮೊಬೈಲ್ ಕರೆ ಮಾಡಿ ಬೇಡಿಕೆ ಇಟ್ಟಿದ್ದಳು. ಮೊದಲು ಈ ನಿವೃತ್ತ ಪ್ರೊಫೆಸರ್‌ಗೆ ಮೊಬೈಲ್‌ನಲ್ಲಿ ಮಾತನಾಡುತ್ತ ಪರಿಚಯ ಮಾಡಿಕೊಂಡ ಯುವತಿ, ನಂತರ ಹಣದ ಬೇಡಿಕೆ ಇಟ್ಟಿದ್ದಾಳೆ.
ಯುವತಿ ಹಣ ಕೇಳಿದಾಗ ನಿವೃತ್ತ ಪ್ರೊಫೆಸರ್ ಹಣ ಕೊಟ್ಟಿರಲಿಲ್ಲ. ಆಗ ವೀಡಿಯೋ ಕಾಲ್ ಮಾಡಿದ ಆ ಯುವತಿ, ಇವರ ಫೋಟೋ ತೆಗೆದುಕೊಂಡು ಅಶ್ಲೀಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ. ಮಾರ್ಯಾದೆಗೆ ಅಂಜಿದ ನಿವೃತ್ತ ಪ್ರೊಫೆಸರ್, ಆಕೆ ಕೇಳಿದ್ದಕ್ಕೆ ಹಣ ಕೊಡುತ್ತಾ ಬಂದಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಬೆಂಗಳೂರಿನಲ್ಲಿ ಲ್ಯಾಂಡ್ ಆಯ್ತು ವಿಶ್ವದ ದೊಡ್ಡ ವಿಮಾನ
ನಿವೃತ್ತ ಪ್ರೊಫೆಸರ್ 21 ಲಕ್ಷ ರೂ. ಕಳೆದುಕೊಂಡ ಬಳಿಕ ಹುಬ್ಬಳ್ಳಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಅಂಜಲಿ ಶರ್ಮಾ ಎಂಬಾಕೆ ಇವರಿಗೆ ವಿಡಿಯೊ ಕಾಲ್ ಮಾಡಿದ್ರೆ, ಆಕೆಯ ಜೊತೆ ಇದ್ದ ವಿಕ್ರಂ ಸೈಬರ್ ಕ್ರೈಂ ದೆಹಲಿ ಪೊಲೀಸ್ ಎಂದು ಹೆಸರು ಹೇಳಿ ದುಡ್ಡು ಪೀಕಿದ್ದಾನೆ.
ಸದ್ಯ ನನಗೆ ಆದ ರೀತಿ ಬೇರೆ ಯಾರಿಗೂ ಆಗದಿರಲಿ, ಅದರಲ್ಲೂ ಯುವಕರು ಇಂತಹ ಬಲೆಗೆ ಬೀಳಬಾರದು ಎಂದು ನಿವೃತ್ತ ಪ್ರೊಫೆಸರ್ ಹೇಳಿದ್ದಾರೆ. ಅಲ್ಲದೇ ದೆಹಲಿ ಸೈಬರ್ ಕ್ರೈಂ ಪೊಲೀಸರಿಗೂ ಈ ಬಗ್ಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿ ಹೆಸರಿನಲ್ಲಿ ಬಲವಂತದ ಮತಾಂತರ- ಮದುವೆ ಕಥೆ ಕಟ್ಟಿ ಧರ್ಮವನ್ನೇ ಬದಲಿಸಿದ!