ಬೆಂಗಳೂರು: 2023ರ ಚುನಾವಣೆಗೆ ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ ಬೇಟೆ ಶುರು ಮಾಡಿದ್ದಾರೆ. ಇಂದು ಹುಬ್ಬಳ್ಳಿಗೆ (Hubballi) ಎಂಟ್ರಿ ಕೊಡುವ ಮೂಲಕ ಕರ್ನಾಟಕದ ಅಶ್ವಮೇಧ ಯಾಗಕ್ಕೆ ಚಾಲನೆ ನೀಡಲಿದ್ದಾರೆ.
ಇಂದಿನಿಂದ ಕರ್ನಾಟಕದಲ್ಲಿ (Karnataka) ಮೋದಿ ಅಬ್ಬರ ಶುರುವಾಗಲಿದ್ದು, ಚುನಾವಣೆ ಅಖಾಡಕ್ಕೆ ಇಳಿದ ನಮೋಗೆ ಈ ಬಾರಿ ಯುವಕರೇ ಟಾರ್ಗೆಟ್ ಆಗಿದ್ದಾರೆ. ಯುವ ಸಮೂಹದ ಮೇಲೆ ಕೇಂದ್ರೀಕೃತವಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ ಪ್ರಧಾನಿ ಮೋದಿ. ಯುವ ಮತದಾರ ಒಲವು ಪಡೆದು ಚುನಾವಣೆ ಗೆಲ್ಲೋಕೆ ಪ್ಲ್ಯಾನ್ ಮಾಡಿದ್ದಾರೆ.
Advertisement
Advertisement
ಚುನಾವಣೆ ಆಯೋಗದ ಪ್ರಕಾರ ರಾಜ್ಯದಲ್ಲಿ ಈ ಬಾರಿ ಸುಮಾರು 5.5 ಕೋಟಿ ಮತದಾರರು ಇದ್ದಾರೆ. ಈ ಬಾರಿ ಹೊಸದಾಗಿ 7 ಲಕ್ಷ ಯುವಕರ ಮತಗಳು ಸೇರ್ಪಡೆಯಾಗಿವೆ. ಈ 7 ಲಕ್ಷ ಯುವ ಸಮೂಹದ ಮತಗಳ ಮೇಲೆ ನರೇಂದ್ರ ಮೋದಿ ಕಣ್ಣಿಟ್ಟಿದ್ದಾರೆ. ಹೀಗಾಗಿ ಇಂದಿನ ಕಾರ್ಯಕ್ರಮದ ಮೂಲಕ ಮೋದಿ ಮತ ಬೇಟೆ ಸಿದ್ಧತೆ ಮಾಡಿದ್ದಾರೆ.
Advertisement
ಚುನಾವಣೆಯಲ್ಲಿ ಯುವ ಸಮೂಹಕ್ಕೆ ಹೆಚ್ಚಿನ ಆದ್ಯತೆ (ಟಿಕೆಟ್) ಬಗ್ಗೆ ಪ್ರಸ್ತಾಪ ಮಾಡೋದು. ಗುಜರಾತ್ ಮಾದರಿಯಲ್ಲಿ ಚುನಾವಣೆ ಪ್ರಚಾರ ಕೈಗೊಳ್ಳಲಿದ್ದಾರೆ. ಕೇಂದ್ರ ಸರ್ಕಾರ ಯುವಕರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಪ್ರಚಾರದ ಮೂಲಕ ಯುವ ಸಮೂಹವನ್ನು ಬಿಜೆಪಿ ಕಡೆ ಮನಸ್ಸು ಮಾಡಲು ಪ್ರೇರೇಪಿಸುವುದು. ದೇಶಾಭಿಮಾನಿ, ಮೇಕ್ ಇನ್ ಇಂಡಿಯಾ ಸೇರಿದಂತೆ ದೇಶೀಯವಾಗಿ ಯುವಕರಿಗೆ ಸ್ಪೂರ್ತಿ ತುಂಬುವ ಬಗ್ಗೆ ಪ್ರಚಾರ ಮಾಡೋದು ಮೋದಿ ಪ್ಲ್ಯಾನ್ ಆಗಿದೆ.
Advertisement
ವಿವೇಕಾನಂದರ ಕಾರ್ಯಕ್ರಮ ಆಗಿರುವುದರಿಂದ ಯುವ ಸಮೂಹಕ್ಕೆ ಬಂಪರ್ ಕೊಡುಗೆಯನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಇದಲ್ಲದೆ ಅಗ್ನಿವೀರ್ ಯೋಜನೆ, ರೋಜ್‌ಗಾರ್ ಮೇಳದ ಬಗ್ಗೆ ಪ್ರಸ್ತಾಪ ಮಾಡಿ ಯುವ ಸಮೂಹವನ್ನು ಸೆಳೆಯುವುದು ಮೋದಿ ಪ್ಲ್ಯಾನ್ ಆಗಿದೆ. 2023ರ ವೇಳೆಗೆ 10 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಯೋಜನೆ ಬಗ್ಗೆ ಯುವಕರಿಗೆ ಮಾಹಿತಿ ನೀಡುವ ಮೂಲಕ ಯುವ ಸಮೂಹದ ಟಾರ್ಗೆಟ್ ಮಾಡಲಿದ್ದಾರೆ. ಮುದ್ರಾ ಯೋಜನೆ ಸೇರಿದಂತೆ ಅನೇಕ ಆರ್ಥಿಕ ಸಹಾಯದ ಯೋಜನೆ ಬಗ್ಗೆ ಯುವಕರಿಗೆ ಹುರಿದುಂಬಿಸಿ ಯುವ ಸಮೂಹವನ್ನು ಸೆಳೆಯುವುದು ಮೋದಿ ಅವರ ತಂತ್ರಗಾರಿಕೆ ಆಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k