ಬೆಂಗಳೂರು: ಸಾಫ್ಟ್‌ವೇರ್ ಇಂಜಿನಿಯರ್ ಯುವತಿಯೊಬ್ಬಳು ತಾನು ವಾಸವಾಗಿದ್ದ ಪಿಜಿಯ (PG) 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ (Bengaluru Whitefield) ನಡೆದಿದೆ.
ಆಂಧ್ರಪ್ರದೇಶದ ಕಡಪ ಮೂಲದ ಗೌತಮಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ನಗರದ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಗೌತಮಿ, ಗುರುವಾರ ಸಂಜೆ 7 ಗಂಟೆ ವೇಳೆಗೆ ವೈಟ್‌ಫೀಲ್ಡ್ನ ಪ್ರಶಾಂತ ಲೇಔಟ್‌ನ ಪಿಜಿಯ ಐದನೇ ಹಂತದಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: Chhattisgarh | ಭದ್ರತಾ ಪಡೆಗಳಿಂದ ಎನ್‌ಕೌಂಟರ್ – 14 ನಕ್ಸಲರು ಬಲಿ
ವಿಚಾರ ತಿಳಿದ ಪೊಲೀಸರು, ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾಳೆ. ಈ ವೇಳೆ ಗೌತಮಿ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಸತ್ತಮೇಲೆ ಮೃತದೇಹವನ್ನು ಪೋಸ್ಟ್ ಮಾರ್ಟಂ ಮಾಡಬೇಡಿ, ನಮ್ಮ ತಂದೆ ತಾಯಿಗೆ ಮೃತದೇಹವನ್ನು ಹಸ್ತಾಂತರ ಮಾಡಿ ಅಂತ ಬರೆದು ಕೊನೆಯಲ್ಲಿ ಪೋಷಕರಿಗೆ ಸಾರಿ ಅಂತಾ ಬರೆದಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಭಯೋತ್ಪಾದನೆ ಆರೋಪದಿಂದ ಕುಟುಂಬ ರಕ್ಷಿಸಲು 2.5 ಕೋಟಿ ಲಂಚಕ್ಕೆ ಬೇಡಿಕೆ – NIA ಅಧಿಕಾರಿಯನ್ನೇ ಬಂಧಿಸಿದ ಸಿಬಿಐ