ಯುವ ಗಾಯಕಿ ಆತ್ಮಹತ್ಯೆ

Public TV
1 Min Read
SINGER DEATH

ಭುವನೇಶ್ವರ: 22 ವರ್ಷದ ಗಾಯಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಡೆದಿದ್ದು, ಬ್ರೇಕಪ್ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತ ಗಾಯಕಿಯನ್ನು ಪ್ರಭಾತಿ ಜೆನಾ ಎಂದು ಗುರುತಿಸಲಾಗಿದ್ದು, ಜಿಲ್ಲೆಯ ಧಮನಗರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪದ್ಮಾಪುಖರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಪ್ರಭಾತಿ ವಿವಿಧ ಶೋಗಳಲ್ಲಿ ಹಾಡು ಹಾಡುತ್ತಿದ್ದು, ‘ಮೆಲೋಡಿ ಕ್ವೀನ್’ ಎಂದು ಖ್ಯಾತಿ ಪಡೆದಿದ್ದರು. ಆದರೆ ತಮ್ಮ ಮನೆಯಲ್ಲಿ ದುಪಟ್ಟನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Melody singer

ಈ ಬಗ್ಗೆ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಮಾಹಿತಿ ತಿಳಿದು ದೇಹಗರ್ ಪೊಲೀಸರು ಮನೆಗೆ ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಗಾಗಿ ಭದ್ರಾಕ್ ಜಿಲ್ಲೆಯ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಕಿಯ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಪ್ರಭಾತಿ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತದೇಹದ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಪೋಷಕರನ್ನು ಉದ್ದೇಶಿಸಿ ಬರೆದಿದ್ದು. ಆದರೆ ತನ್ನ ಸಾವಿಗೆ ಯಾರು ಜವಾಬ್ದಾರದಲ್ಲ ಎಂದು ಬರೆದಿದ್ದಾರೆ. ಜೊತೆಗೆ “ನಾನು ನನ್ನ ಸಹೋದರಿಯ ಮದುವೆ ನೋಡಲು ಬಯಸಿದ್ದೆ. ಅದು ಸಾಧ್ಯವಾಗಲಿಲ್ಲ. ನಾನು ಮತ್ತೊಮ್ಮೆ ಮರುಜನ್ಮ ಪಡೆಯುವುದಾದರೆ, ನಾನು ನಿಮ್ಮ ಮಗಳಾಗಿ ಜನಿಸಲು ಬಯಸುತ್ತೇನೆ. ನನಗಾಗಿ ಯಾರು ಅಳುವುದು ಬೇಡವೆಂದು ಮನವಿ ಮಾಡಿದ್ದಾರೆ.

SINGER

ಗುರುವಾರ ರಾತ್ರಿ ಜಜ್ಪುರ್ ಜಿಲ್ಲೆಯ ಪಣಿಕೋಯಿಲಿ ಪ್ರದೇಶದಲ್ಲಿ ಸಮಾರಂಭಕ್ಕೆಂದು ಪ್ರಭಾತಿ ಹೋಗಿದ್ದಳು. ಅಲ್ಲಿಂದ ಮರುದಿನ ಬೆಳಗ್ಗೆ ಮನೆಗೆ ಹಿಂದಿರುಗಿದ್ದು, ರಾತ್ರಿ ಊಟ ಮಾಡಿ ತಮ್ಮ ರೂಮಿಗೆ ಹೋಗಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.

ತನಿಖೆ ವೇಳೆ ಮೃತ ಪ್ರಭಾತಿ ಫೋನಿಗೆ ಅಪರಿಚಿತ ಯುವಕನೊಬ್ಬ ಅನೇಕ ಬಾರಿ ಕರೆ ಮಾಡಿದ್ದಾನೆ. ಇವರು ಕೂಡ ಆತನ ಫೋನ್ ರಿಸೀವ್ ಮಾಡಿ ಮಾತನಾಡಿದ್ದಾರೆ. ಸದ್ಯಕ್ಕೆ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಧಮನಗರ್ ಪೊಲೀಸರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *