ಚಿಕ್ಕಬಳ್ಳಾಪುರ: ಕೃಷಿ ಹೊಂಡಕ್ಕೆ ಬಿದ್ದು ಮಾಜಿ ಪ್ರಿಯಕರನೊಂದಿಗೆ (Ex Lover) ವಿವಾಹಿತ ಯುವತಿ (Married Woman) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ (Chintamani) ತಾಲೂಕಿನ ದೊಡ್ಡಪಲ್ಲಿ ಗ್ರಾಮದಲ್ಲಿ ನಡೆದಿದೆ.
ಅನುಷಾ (19), ವೇಣು (21) ಮೃತ ದುರ್ದೈವಿಗಳು. ಈ ಜೋಡಿಗಳು 2 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಗೆ (Love) ಮನೆಯಲ್ಲಿ ಒಪ್ಪದ ಕಾರಣ ಚೌಡರೆಡ್ಡಿ ಎಂಬ ವ್ಯಕ್ತಿ ಜೊತೆಯಲ್ಲಿ ಯುವತಿಗೆ ಮನೆಯವರು ಮದುವೆ ಮಾಡಿದ್ದರು. ಆಷಾಡಕ್ಕೆ ಎಂದು ಮನೆಗೆ ಬಂದಾಗ ಯುವತಿ ಮತ್ತೆ ಹಳೆ ಪ್ರೇಮಿಯ ಜೊತೆ ಸಂಪರ್ಕ ಬೆಳೆಸಿದ್ದಳು. ಮೊದಲೇ ಪ್ರೀತಿಗೆ ನಿರಾಕರಿಸಿದ್ದ ಕುಟುಂಬ. ಹಾಗಾಗಿ ಮತ್ತೆ ಇಬ್ಬರು ಒಟ್ಟಿಗೆ ಬಾಳಲು ಬಿಡುವುದಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ
ಆಷಾಡಕ್ಕೆ ತವರು ಮನೆಗೆ ಬಂದು ಮಾಜಿ ಪ್ರಿಯಕರನೊಂದಿಗೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೊಂಟಕ್ಕೆ ವೇಲ್ ಬಿಗಿದುಕೊಂಡು ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಂಚಾರ್ಲಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 46 ವರ್ಷದ ನಂತರ ತೆರೆಯಲಿದೆ ಪುರಿ ಜಗನ್ನಾಥ ದೇಗುಲ ರತ್ನ ಭಂಡಾರದ ಬಾಗಿಲು!