ಬೆಂಗಳೂರು: ನಗರದ ಕೋಣನಕುಂಟೆ (Konanakunte) ವ್ಯಾಪ್ತಿಯ ವಡ್ಡರಪಾಳ್ಯದಲ್ಲಿ ಸ್ನೇಹಿತರ ನಡುವೆ ನಡೆದ ಎಣ್ಣೆ ಪಾರ್ಟಿಯ ವೇಳೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಎದೆಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಆರೋಪದಡಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ 1 ರಂದು ಗಿರಿವರ್ಧನ್ ಎಂಬಾತನ ನಿವಾಸದಲ್ಲಿ ನಡೆದ ಪಾರ್ಟಿಯಲ್ಲಿ (Drinks Party) ರಾಹುಲ್ ಎಂಬಾತನಿಗೆ ಚಾಕು ಇರಿದಿದ್ದು, ಗಿರಿವರ್ಧನ್‌ನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 1 ರಂದು ರಾಹುಲ್, ದಿಲೀಪ್, ಸ್ಕಂದ, ಕಾರ್ತಿಕ್ ಹಾಗೂ ಗಿರಿವರ್ಧನ್ ಸೇರಿ ವಡ್ಡರಪಾಳ್ಯದಲ್ಲಿರುವ ಗಿರಿವರ್ಧನ್ ನಿವಾಸದಲ್ಲಿ ಪಾರ್ಟಿ ಮಾಡಿದ್ದರು.

ಮದ್ಯಪಾನ (liquor) ಮಾಡುತ್ತಿದ್ದಾಗ ಯಾವುದೋ ಕ್ಷುಲ್ಲಕ ವಿಚಾರಕ್ಕೆ ರಾಹುಲ್ ಮತ್ತು ಗಿರಿವರ್ಧನ್ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ, ಗಿರಿವರ್ಧನ್ ತನ್ನ ಕಾರಿನಿಂದ ಚಾಕು ತಂದು ರಾಹುಲ್ ಎದೆಗೆ ಇರಿದಿದ್ದಾನೆ. ಇದನ್ನೂ ಓದಿ: ಲವ್ ಜಿಹಾದ್ ಕೇಸಲ್ಲಿ ಜಿಮ್ ಟ್ರೈನರ್‌ಗೆ ಸಂಕಷ್ಟ – ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ ಸಂತ್ರಸ್ತೆ
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ರಾಹುಲ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಠಾಣೆ ಪೊಲೀಸರು, ಆರೋಪಿ ಗಿರಿವರ್ಧನ್‌ನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಕೆಲಸದಿಂದ ವಜಾ ಆರೋಪ – ಸಲೂನ್ ಮಾಲೀಕನಿಗೆ ಬ್ಯೂಟಿಷಿಯನ್ ಪತಿಯಿಂದ ಹಲ್ಲೆ..!

