ಬೀಜಿಂಗ್: 19 ವರ್ಷದ ಯುವಕನೊಬ್ಬ ಕ್ರೇನ್ ಸಹಾಯದಿಂದ ಅರ್ಧ ಗಂಟೆಯಲ್ಲಿ 14 ಮಂದಿ ಜನರ ಪ್ರಾಣವನ್ನು ಕಾಪಾಡಿರುವ ಘಟನೆ ಚೀನಾದ ಫೂಶುನ್ ನಗರದಲ್ಲಿ ನಡೆದಿದೆ.
ಯುವಕ ಲ್ಯಾನ್ ಜುನ್ಸ್ ಜನರನ್ನು ಕಾಪಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ. ಈ ಘಟನೆ ಚೀನಾದ ಲಿಯಾನಿಂಗ್ ಪ್ರದೇಶದ ಫುಶನ್ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
Advertisement
Advertisement
ಲ್ಯಾನ್ ಲಿಯಾನಿಂಗ್‍ನ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಆತ ಕೆಲಸ ಮಾಡುತ್ತಿದ್ದ ಸಮೀಪದ ಪ್ರದೇಶದಲ್ಲಿ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಲ್ಯಾನ್ ತಕ್ಷಣವೇ ಕ್ರೇನ್ ಅನ್ನು ಕಟ್ಟಡದ ಬಳಿ ತೆಗೆದುಕೊಂಡು ಹೋಗಿದ್ದಾನೆ. ನಂತರ ಕ್ರೇನ್‍ನ ಬಾಸ್ಕೆಟ್‍ನಲ್ಲಿ ಜನರನ್ನು ಕೂರಸಿಕೊಂಡು ಬೆಂಕಿ ಹೊತ್ತಿಕೊಂಡಿದ್ದ ಕಟ್ಟಡದಿಂದ ಬೇರೆಡೆಗೆ ಸುರಕ್ಷಿತವಾಗಿ ಸ್ಥಳಾಂತರ ಮಾಡಿದ್ದಾನೆ.
Advertisement
ಲ್ಯಾನ್ ಸುಮಾರು ಅರ್ಧ ಗಂಟೆಯಲ್ಲಿ 14 ಜನರ ಪ್ರಾಣವನ್ನು ಉಳಿಸಿದ್ದಾನೆ. ಇತ್ತ ಲ್ಯಾನ್ ಸಹಾಯ ಮಾಡುತ್ತಿದ್ದ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
Advertisement
ಅಷ್ಟೇ ಅಲ್ಲದೇ ಜನರು ಯುವಕನ ಧೈರ್ಯವನ್ನು ಮೆಚ್ಚಿ ಭೇಷ್ ಎನ್ನತ್ತಿದ್ದಾರೆ. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಲ್ಯಾನ್ “ಬೆಂಕಿ ಕಾಣಿಸಿಕೊಂಡ ತಕ್ಷಣ ನಾನು ಕಟ್ಟಡದ ಬಳಿ ಹೋದೆ. ಆ ಸಂದರ್ಭದಲ್ಲಿ ಕಟ್ಟಡದ ಒಳಗೆ ಸಿಲುಕಿಕೊಂಡವರನ್ನು ಹೇಗೆ ರಕ್ಷಣೆ ಮಾಡಬೇಕು ಎಂದು ಮಾತ್ರ ಯೋಚಿಸುತ್ತಿದ್ದೆ. ತಕ್ಷಣ ಈ ಐಡಿಯಾ ಬಂದಿತ್ತು. ಹೀಗಾಗಿ ಕ್ರೇನ್ ಮೂಲಕ ಅವರನ್ನು ಬಚಾವ್ ಮಾಡಿದೆ” ಎಂದು ಹೇಳಿದ್ದಾನೆ.