ಚಿಕ್ಕಮಗಳೂರು: ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರದ ಮುಂದೆ ನಿಂತು ಪಾಕಿಸ್ತಾನ ಜಿಂದಾಬಾಂದ್ ಎಂದು ಕೂಗಿದ ವ್ಯಕ್ತಿಗೆ ಸ್ಥಳಿಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್‍ಪೋಸ್ಟ್ ಬಳಿ ನಡೆದಿದೆ.
ಚಿತ್ರದುರ್ಗದಿಂದ ಬಸ್ ಮಾಡಿಕೊಂಡು ಮುಳ್ಳಯ್ಯನಗಿರಿ ಪ್ರವಾಸಕ್ಕೆ ಬಂದಿದ್ದ ಯುವಕರ ತಂಡ ಕಾಫಿ ಕುಡಿಯಲೆಂದು ಚಿಕ್ಕಮಗಳೂರಿನ ಕೈಮರ ಹ್ಯಾಡ್‍ಪೋಸ್ಟ್ ಬಳಿ ಬಸ್ ನಿಲ್ಲಿಸಿದ್ದರು. ಈ ವೇಳೆ ಬಸ್ಸಿನಲ್ಲಿದ್ದ ಯುವಕ ಯೂನಸ್ ಪುಲ್ವಾಮ ಹುತಾತ್ಮ ಯೋಧರ ಭಾವಚಿತ್ರವನ್ನು ನೋಡಿ ಅದರ ಮುಂದೆ ನಿಂತು ‘ಪಾಕಿಸ್ತಾನ ಜಿಂದಾಬಾಂದ್’ ಎಂದು ಭಾರತದ ವಿರುದ್ಧ ಘೋಷಣೆ ಕೂಗಿದ್ದಾನೆ.
Advertisement
ಸ್ಥಳದಲ್ಲಿದ್ದ ಜನರು ಘೋಷಣೆಯನ್ನು ಕೇಳಿಕೊಂಡು ಯುವಕನ ಬಳಿ ಬಂದು ಯಾಕೆ ಹೀಗೆ ದೇಶ ದ್ರೋಹದ ಘೋಷಣೆ ಕೂಗುತ್ತೀಯಾ ಎಂದು ಕೇಳಿದ್ದಾರೆ. ಅದಕ್ಕೆ ಯೂನಸ್ ಸ್ಥಳೀಯರಿಗೂ ಅಚಾಚ್ಯ ಶಬ್ಧಗಳಿಂದ ನಿಂಧಿಸಿದ್ದಾನೆ. ಇದರಿಂದ ಕೋಪಗೊಂಡ ಯುವಕರು ಯೂನಸ್‍ನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಫೋನ್ ಮಾಡಿ ಅವರಿಗೆ ಒಪ್ಪಿಸಿದ್ದಾರೆ.
Advertisement
ಯೂನಸ್‍ನನ್ನ ವಶಕ್ಕೆ ಪಡೆದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv