– ಕೊಲೆ ಎಂದು ಬಿಂಬಿಸಲು ವಿಫಲ ಯತ್ನ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಿಯಕರನೇ ತನ್ನ ಪ್ರಿಯತಮೆ (Lover Murder) ಯನ್ನು ಕೊಲೆ ಮಾಡಿ ಬಳಿಕ ಎಸ್ಕೇಪ್ ಆದ ಘಟನೆ ನಡೆದಿದೆ.
ಬೆಂಗಳೂರಿನ ಜೀವನ್ ಭಿಮಾ ನಗರ (Jeevan Bhima Nagar) ದ ಕೋಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್ ಮೂಲದ ಆಕಾಂಕ್ಷಾ ಮೃತ ಯುವತಿಯಾಗಿದ್ದು, ಈಕೆಯನ್ನು ದೆಹಲಿ ಮೂಲದ ಅರ್ಪಿತ್ ಕೊಲೆ ಮಾಡಿದ್ದಾನೆ.
Advertisement
Advertisement
ಈ ಹಿಂದೆ ಆಕಾಂಕ್ಷಾ ಹಾಗೂ ಅರ್ಪಿತ್ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಕೆಲಸ ಬದಲಾವಣೆ ಮಾಡಿ ಬೇರೆ ಬೇರೆ ಕಡೆ ಕೆಲಸಮಾಡುತ್ತಿದ್ದರು. ಯುವತಿ ಬಿಕಾಂ ವ್ಯಾಸಂಗ ಮಾಡಿ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ – ತನಿಖೆ ಆರಂಭಿಸಿದ ಸಿಬಿಐ
Advertisement
ಇಬ್ಬರು ಒಟ್ಟಿಗೆ ವಾಸ ಮಾಡುತ್ತಿದ್ದರು. ಇತ್ತೀಚೆಗೆ ಇವರಿಬ್ಬರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಇಬ್ಬರು ಬೇರೆಯಾಗಬೇಕು ಎಂದು ಮಾತಾಡಿಕೊಂಡಿದ್ದರು. ಇದಾದ ಬಳಿಕ ಸೋಮವಾರ ಇಬ್ಬರು ಮನೆಯಲ್ಲಿ ಇರುವಾಗ ಗಲಾಟೆ ಶುರುವಾಗಿದೆ. ಬಳಿಕ ಯುವತಿಯನ್ನು ಅರ್ಪಿತ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
Advertisement
ಕೊಂದ ಬಳಿಕ ಯುವತಿಯ ಕುತ್ತಿಗೆಗೆ ಬಟ್ಟೆ ಕಟ್ಟಿ ನೇಣು ಹಾಕಿಕೊಂಡು ಸಾವನಪ್ಪಿರುವ ರೀತಿ ಬಿಂಬಿಸುವ ಯತ್ನ ಮಾಡಿದ್ದಾನೆ. ಆದರೆ ಮೃತದೇಹವನ್ನು ಫ್ಯಾನ್ಗೆ ಕಟ್ಟಲಾಗದೆ ನೆಲದ ಮೇಲೆ ಬಿಟ್ಟು ಮನೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. ರಾತ್ರಿ ಮತ್ತೋರ್ವ ರೂಮೆಟ್ ಕೆಲಸ ಮುಗಿಸಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮೊದಲು ಅನುಮಾನಾಸ್ಪದ ಸಾವು ಎಂದುಕೊಂಡಿದ್ದ ಪೊಲೀಸರಿಗೆ ಸ್ಥಳ ಪರಿಶೀಲನೆ ಬಳಿಕ ಕೊಲೆ ಎಂಬುದು ಬೆಳಕಿಗೆ ಬಂದಿದೆ.
ಸದ್ಯ ಜೀವನ್ ಭಿಮಾ ನಗರ ಪೊಲೀಸರು ಆರೋಪಿ ವಿರುದ್ಧ ಕೊಲೆ ಕೇಸ್ ದಾಖಲು ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಅರ್ಪಿತ್ಗಾಗಿ ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ.