ಹಾವೇರಿ: ದುಷ್ಕರ್ಮಿಗಳು ಯವಕನ ಮೇಲೆ ಹಲ್ಲೆ ಮಾಡಿ ಕತ್ತು ಬಿಗಿದು ಮೃತದೇಹ ಎಸೆದು ಹೋದ ಘಟನೆ ಹಾವೇರಿ ತಾಲೂಕಿನ ಸೋಮನಕಟ್ಟಿ ಗ್ರಾಮದ ಬಳಿ ನಡೆದಿದೆ.
ಗದಗ ಜಿಲ್ಲೆಯ ನಿವಾಸಿ ನವೀನ್ ರಾಠೋಡ್ (26) ಮೃತ ವ್ಯಕ್ತಿ. ನವೀನ್ ಹಲವು ವರ್ಷಗಳಿಂದ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಚಿಕ್ಕಮ್ಮಳ ಮನೆಯಲ್ಲಿ ವಾಸವಾಗಿದ್ದ. ಆದರೆ ನವೀನ್ ದೊಡ್ಡವನಾಗುತ್ತಿದ್ದಂತೆ ದುಶ್ಚಟಕ್ಕೆ ದಾಸನಾಗಿದ್ದ. ಕುಡಿತದ ಜೊತೆಗೆ ಗಾಂಜಾವನ್ನು ರೂಢಿ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೇ ನವೀನ್ ಮೇಲೆ ಕೆಲವೊಂದು ಕಳ್ಳತನದ ಪ್ರಕರಣಗಳಿವೆ. ನವೀನ್‌ನ ಸುಧಾರಣೆಗೆ ಆತನ ಮನೆಯವರು ಸಾಕಷ್ಟು ಪ್ರಯತ್ನಿಸಿದ್ರೂ ಆತ ಮಾತ್ರ ಸುಧಾರಣೆ ಆಗಿರಲಿಲ್ಲ.
ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಇರುತ್ತಿದ್ದ ನವೀನ್ ಮನೆಗೆ ಯಾವಾಗ ಬರ್ತಾನೆ, ಎಲ್ಲಿಗೆ ಹೋಗ್ತಾನೆ ಅನ್ನೋದು ಆತನ ಮನೆಯವರಿಗೆ ಗೊತ್ತಾಗುತ್ತಿರಲಿಲ್ಲ. ಆದರೆ ನಿನ್ನೆ ರಾತ್ರಿ ಮನೆಯಿಂದ ಹೋಗಿದ್ದ ನವೀನ್ ಅನ್ನು ಯಾರೋ ಹೊಡೆದು, ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ನಂತರ ಮೃತದೇಹವನ್ನು ಸೋಮನಕಟ್ಟಿ ಗ್ರಾಮದ ಬಳಿ ಇರುವ ಹಾವೇರಿ-ಗುತ್ತಲ ರಸ್ತೆಯ ಪಕ್ಕದಲ್ಲಿ ಎಸೆದು ಹೋಗಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ನಡೆಸಲು ನಾವು ಸಿದ್ಧ: ಆರ್. ಅಶೋಕ್
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗುತ್ತಲ ಠಾಣೆ ಪೊಲೀಸರು, ಮೃತನ ಬಳಿ ದೊರೆತ ಡ್ರೈವಿಂಗ್ ಲೈಸೆನ್ಸ್ ಆಧಾರದ ಮೇಲೆ ಆತನ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ- ಬಂಧಿತ ಕೆಲಸ ಮಾಡುತ್ತಿದ್ದ ಅಂಗಡಿಗೆ ಮುತ್ತಿಗೆ