ಬೆಳಗಾವಿ: ಕೈ ಕಾಲು ಕಟ್ಟಿ ಹಾಕಿ ನೇಣು ಬಿಗಿದು ಯುವಕನನ್ನು ಕ್ರೂರವಾಗಿ ಕೊಲೆ ಮಾಡಿ ಎಸೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣ ಹೊರವಲಯದ ಆರ್‌ಟಿಓ ಕಛೇರಿ ಮುಂಭಾಗದಲ್ಲಿ ನಡೆದಿದೆ. ಅಥಣಿ ತಾಲೂಕಿನ ದರೂರ ಗ್ರಾಮದ ಸಿದ್ಧಾರೂಢ ಶಿರಗುಪ್ಪಿ(25) ಕೊಲೆಯಾದ ವ್ಯಕ್ತಿ.
ಸಿದ್ಧಾರೂಢ ಶಿರಗುಪ್ಪಿ ಕಳೆದ 2 ವರ್ಷಗಳಿಂದ ಮಾಜಿ ಡಿಸಿಎಂ ಸಹೋದರ, ಕೃಷ್ಣಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪಾ ಸವದಿಯ ಕಾರು ಚಾಲನಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಕಳೆದ ರಾತ್ರಿ ಪರಪ್ಪ ಸವದಿ ಜೊತೆ ಉಗಾರ ಗ್ರಾಮಕ್ಕೆ ತೆರಳಿದ್ದ ಸಿದ್ಧಾರೂಢ ರಾತ್ರಿ 11 ಗಂಟೆಗೆ ಅಥಣಿ ಪಟ್ಟಣಕ್ಕೆ ವಾಪಸ್ ಬಂದು ರಾತ್ರಿ ಮನೆಗೆ ತೆರಳುತ್ತಿದ್ದಾಗ ತಡ ರಾತ್ರಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡೀಸೆಲ್ ಕದಿಯಲು ಬಂದವರ ಕಾಲಿಗೆ ಪೊಲೀಸರಿಂದ ಗುಂಡೇಟು
ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಗ MLA- ತಾಯಿ ಸರ್ಕಾರಿ ಶಾಲೆಯಲ್ಲಿ ಸ್ವೀಪರ್