ಮೈಸೂರು: ತುಂಬಿ ಹರಿಯುತ್ತಿರುವ ಕಪಿಲೆಯಲ್ಲಿ ಈಜಲು ತೆರಳಿ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಅಹಮದ್ ಕರೀಂ ನಾಪತ್ತೆಯಾದ ಯುವಕ. ನಂಜನಗೂಡು ತಾಲೂಕು ಹೆಜ್ಜಿಗೆ ಗ್ರಾಮದ ಕಪಿಲೆ ಬಲಿ ಘಟನೆ ನಡೆದಿದೆ. ಹೆಜ್ಜಿಗೆ ಸೇತುವೆಯಿಂದ ಮೂವರು ಯುವಕರು ನದಿಗೆ ಹಾರಿ ಹುಚ್ಚಾಟ ಮೆರೆದಿದ್ದಾರೆ. ಇದರಲ್ಲಿ ಇಬ್ಬರು ಈಜಿ ದಡ ಸೇರಿದರೆ ಕರೀಂ ನಾಪತ್ತೆಯಾಗಿದ್ದಾನೆ.
ಸದ್ಯ ಅಹಮದ್ ಕರೀಂಗಾಗಿ ನದಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಹಲ್ಲೆಗೊಳಗಾಗಿದ್ದ ಮಾಜಿ ಕಾರ್ಪೋರೇಟರ್ ಪತಿ ಆಯುಬ್ ಖಾನ್ ನಿಧನ