CrimeDistrictsKarnatakaLatestMain PostRaichur

ಅನುಚಿತ ವರ್ತನೆ ಮಾಡಿದ ಯುವಕನಿಗೆ ಲಾಠಿ ರುಚಿ ತೋರಿಸಿದ ಲೇಡಿ ಪಿಎಸ್‍ಐ

ರಾಯಚೂರು: ಅನುಚಿತ ವರ್ತನೆ ತೋರಿಸಿ ಓಡಿ ಹೋದ ಯುವಕನನ್ನು ಚೇಸ್ ಮಾಡಿ ಹಿಡಿದ ಲೇಡಿ ಪಿಎಸ್‍ಐ ಲಾಠಿ ರುಚಿ ತೋರಿಸಿದ್ದಾರೆ.

ಜಿಲ್ಲೆಯ ಸಿರವಾರ ತಾಲೂಕಿನ ಕುರಕುಂದಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ನಟ ಸುದೀಪ್ ಬಂದಿದ್ದರು. ಈ ವೇಳೆ ಸಿರವಾರ ಠಾಣೆ ಪಿಎಸ್‍ಐ ಗೀತಾಂಜಲಿ ಸೇರಿದಂತೆ ಕೆಲ ಪೊಲೀಸರ ಜೊತೆ ಯುವಕ ಅನುಚಿತ ವರ್ತನೆ ತೋರಿದ್ದ. ಅಲ್ಲದೇ ಪೊಲೀಸರ ಲಾಠಿಯನ್ನು ಕಿತ್ತುಕೊಂಡು ಓಡಿಹೋಗಿದ್ದ.

ಓಡಿ ಹೋದ ಯುವಕನನ್ನು ಪೊಲೀಸರು ಚೇಸ್ ಮಾಡಿ ಹಿಡಿದು ಠಾಣೆಗೆ ಎಳೆದೋಯ್ದಿದ್ದಾರೆ. ಜೊತೆಗೆ ಸ್ಥಳದಲ್ಲಿದ್ದ ಪೊಲೀಸರು ಧರ್ಮದೇಟು ನೀಡಿದ್ದಾರೆ. ಸುದೀಪ್ ಆಗಮನ ವೇಳೆ ಅಭಿಮಾನಿಗಳ ನೂಕುನುಗ್ಗುಲು ಉಂಟಾಗಿದ್ದ ಹಿನ್ನೆಲೆ ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿಪ್ರಹಾರ ನಡೆಸಿದರು. ಇದನ್ನೂ ಓದಿ: ತಮ್ಮದೇ ಮೂರ್ತಿ ಅನಾವರಣಕ್ಕೆ ಒಪ್ಪದ ಸುದೀಪ್

Leave a Reply

Your email address will not be published.

Back to top button