ಚಾಮರಾಜನಗರ: ಮೈಕ್ರೋ ಫೈನಾನ್ಸ್ (Microfinance) ಕಿರುಕುಳದಿಂದ ನನ್ನ ಮಗ ಒಂದು ತಿಂಗಳಿಂದ ನಾಪತ್ತೆಯಾಗಿದ್ದಾನೆ ಎಂದು ಮೈಸೂರು (Mysuru) ಮೂಲದ ದಂಪತಿ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ.
ಚಾಮರಾಜನಗರ (Chamarajanagar) ಕಂಟ್ರೋಲ್ ರೂಮ್‍ಗೆ ಮೈಸೂರು ಗುಂಡೂರಾವ್ ನಗರದ ಮಹಾದೇವಸ್ವಾಮಿ ಎಂಬವರು ಕರೆ ಮಾಡಿದ್ದಾರೆ. ಕಂಟ್ರೋಲ್ ರೂಮ್ ಸಿಬ್ಬಂದಿ ಬಳಿ, ನಮ್ಮ ಮಗ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಮಾಡಿಕೊಂಡಿದ್ದಾನೆ. ಈಗ ಅವರ ಕಿರುಕುಳದಿಂದ ಮನೆ ಬಿಟ್ಟು ಹೋಗಿದ್ದಾನೆ ಎಂದು ಹೇಳಿಕೊಂಡಿದ್ದಾರೆ.
ನನ್ನ ಮಗ ಒಂದು ತಿಂಗಳಿಂದ ಇನ್ನೂ ಪತ್ತೆಯಾಗಿಲ್ಲ. ನನಗೆ ಆಕ್ಸಿಡೆಂಟ್ ಆಗಿದೆ, ಕಿವಿ ಕೇಳಿಸಲ್ಲ. ನನ್ನ ಪತ್ನಿಗೆ ಸಹ ಆರೋಗ್ಯ ಸರಿ ಇಲ್ಲ. ನನ್ನ ಮಗನನ್ನು ಹುಡುಕಿ ಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬಂದು ಬಹಳ ಹಿಂಸೆ ಕೊಡ್ತಿದ್ದಾರೆ. ದಿನಕ್ಕೆ ನಾಲ್ಕು ಜನ ಬಂದು ಗಲಾಟೆ ಮಾಡ್ತಿದ್ದಾರೆ. ನನ್ನ ಮಗ ಮೊಬೈಲ್ ಬಳಸ್ತಿಲ್ಲ, ಎಲ್ಲಿದ್ದಾನೆ ಎಂದು ಗೊತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.