10 ದಿನದಲ್ಲಿ ಪ್ರೀತಿ, ಪ್ರಣಯ – ಇನ್ಸ್ಟಾದಲ್ಲಿ ಪರಿಚಯವಾದ ವಿವಾಹಿತ ಪ್ರಿಯತಮೆಯ ಕೊಲೆಯಲ್ಲಿ ಅಂತ್ಯ!

Public TV
1 Min Read
Young man Kills his Lover in Mandya

ಮಂಡ್ಯ: ವಿವಾಹಿತ ಪ್ರಿಯತಮೆಯನ್ನು (Lover) ಕೊಲೈಗೈದು ತನ್ನದೇ ಜಮೀನಿನಲ್ಲಿ ಶವ ಮುಚ್ಚಿಟ್ಟು ಯುವಕನೊಬ್ಬ ಸಿಕ್ಕಿಬಿದ್ದ ಘಟನೆ ಮಂಡ್ಯದ (Mandya) ಕರೋಟಿ ಗ್ರಾಮದಲ್ಲಿ ನಡೆದಿದೆ.

ಹತ್ಯೆಯಾದ ಮಹಿಳೆಯನ್ನು ಹಾಸನ (Hassan) ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಎಂದು ಗುರುತಿಸಲಾಗಿದೆ. ಕರೋಟಿ ಗ್ರಾಮದ ಪುನೀತ್ ಹತ್ಯೆಗೈದ ಆರೋಪಿಯಾಗಿದ್ದಾನೆ. ಇನ್ಸ್ಟಾಗ್ರಾಮ್‍ನಲ್ಲಿ ಯುವಕನಿಗೆ ಪ್ರೀತಿ ಪರಿಚಯವಾಗಿದ್ದಳು. ಇಬ್ಬರ ನಡುವೆ ಹತ್ತೇ ದಿನದಲ್ಲಿ ಪ್ರೀತಿ, ಪ್ರೇಮ ಹಾಗೂ ಪ್ರಣಯ ಎಂದೆಲ್ಲ ನಡೆದು, ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಡಾಬಾಗೆ ನುಗ್ಗಿ ಮೂವರನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು

ಗಂಡ, ಮಕ್ಕಳಿದ್ದರೂ ಪುನೀತ್ ಜೊತೆ ಪ್ರೀತಿ ಲವ್‍ನಲ್ಲಿ ಬಿದ್ದಿದ್ದಳು. ಕಳೆದ ಭಾನುವಾರ ಮೈಸೂರಿಗೆ ಒಟ್ಟಿಗೆ ಕಾರಿನಲ್ಲಿ ತೆರಳಿದ್ದರು. ಇಬ್ಬರು ಮೈಸೂರು, ಮಂಡ್ಯ ಪ್ರವಾಸಿ ಸ್ಥಳಗಳಲ್ಲಿ ಸುತ್ತಾಡಿದ್ದರು. ನಂತರ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಅಲ್ಲೇ ಮಹಿಳೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ್ದಾನೆ. ಬಳಿಕ ತನ್ನ ಜಮೀನಿನಲ್ಲಿ ಶವ ಮುಚ್ಚಿಟ್ಟು ಪರಾರಿಯಾಗಿದ್ದ.

ಪ್ರಿಯತಮೆಯ ಮೊಬೈಲ್‍ಗೆ ಬಂದಿದ್ದ ಕರೆಗಳಿಂದ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗುತ್ತಿಗೆದಾರನ ಹತ್ಯೆ ಕೇಸ್ – ಆರೋಪಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕುಟುಂಬಸ್ಥರು

Share This Article