ಬೆಂಗಳೂರು: ವೈಯಕ್ತಿಕ ಜೀವನ ವಿಚಾರಕ್ಕೆ ಸಲಿಂಗಕಾಮಿಗಳ (Homosexuals Bengaluru) ನಡುವೆ ಗಲಾಟೆಯಾಗಿ ಒಬ್ಬನ ಕೊಲೆಯಲ್ಲಿ ಜಗಳ ಅಂತ್ಯವಾಗಿರುವ ಘಟನೆ ಬೆಂಗಳೂರಿನ (Bengaluru) ಚಂದ್ರಲೇಔಟ್‌ನಲ್ಲಿ ನಡೆದಿದೆ.
ಲಿಯಾಕತ್ ಅಲಿಖಾನ್ ಕೊಲೆಯಾದ ವ್ಯಕ್ತಿ. ಇಲಿಯಾಸ್ ಕೊಲೆ ಮಾಡಿದ ಆರೋಪಿ. ಈತನನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಮೂರು ವರ್ಷದ ಬಾಲಕಿ ಮೇಲೆ ರೇಪ್
ಕಳೆದ ಎರಡು ವರ್ಷಗಳಿಂದ ಲಿಯಾಕತ್ ಮತ್ತು ಇಲಿಯಾಸ್ ಇಬ್ಬರೂ ಹೋಮೊ ಸೆಕ್ಸ್‌ನಲ್ಲಿದ್ದರು. ಕೊಲೆಯಾದ ಎರಡು ದಿನಗಳ ಹಿಂದೆ ಲಿಯಾಕತ್ ಎರಡನೇ ಮದುವೆಯಾಗಿದ್ದ. ಆದರೆ ಲಿಯಾಕತ್ ಜೊತೆ ಇದ್ದ ಸಂಬಂಧದಿಂದಾಗಿ ಇಲಿಯಾಸ್ ಎಂಗೇಜ್‌ಮೆಂಟ್ ಕ್ಯಾನ್ಸಲ್ ಮಾಡಿದ್ದ.
ಇತ್ತೀಚೆಗೆ ಇಲಿಯಾಸ್‌ಗೆ ಮನೆಯಲ್ಲಿ ಹುಡುಗಿ ಹುಡುಕುತ್ತಿದ್ದರು. ತನ್ನ ಸಲಿಂಗಕಾಮದ ಬಗ್ಗೆ ಮನೆಯವರಿಗೆ ಗೊತ್ತಾದರೆ ಏನು ಗತಿ ಎಂದು ಇಲಿಯಾಸ್ ಚಿಂತೆಯಲ್ಲಿದ್ದ. ಇದೇ ವಿಚಾರವಾಗಿ ಲಿಯಾಕತ್ ಜೊತೆ ಜಗಳ ಮಾಡಿಕೊಂಡಿದ್ದ. ಕೊಲೆಯಾಗುವ ಸಮಯದಲ್ಲೂ ಇಬ್ಬರೂ ಹೋಮೊ ಸೆಕ್ಸ್‌ನಲ್ಲಿದ್ದರು. ಇದನ್ನೂ ಓದಿ: ಮುಸ್ಲಿಂ ಯುವತಿಯರು ಐಬ್ರೋ ಮಾಡುವಂತಿಲ್ಲ – ಫತ್ವಾ ಹೊರಡಿಸಿದ ಬರೇಲಿ ಧಾರ್ಮಿಕ ಕೇಂದ್ರ
ಇಲಿಯಾಸ್ ತನ್ನ ಭವಿಷ್ಯದ ವಿಚಾರವಾಗಿ ಲಿಯಾಕತ್ ಜೊತೆ ಗಲಾಟೆ ತೆಗೆದಿದ್ದ. ಈ ವೇಳೆ ಸುತ್ತಿಗೆಯಲ್ಲಿ ಲಿಯಾಕತ್ ತಲೆಗೆ ಹೊಡೆದು, ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಇಲಿಯಾಸ್‌ನನ್ನು ಪೊಲೀಸರು ಬಂಧಿಸಿದ್ದಾರೆ.