ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಯುವಕನೊಬ್ಬನನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಲಾಗಿದೆ (Kidnap). ಜೂನ್ 16ರಂದು ಎಂಜಿ ರಸ್ತೆಯಲ್ಲಿ ಆಂಧ್ರ ಮೂಲದ ಗ್ಯಾಂಗ್‍ನಿಂದ ಸ್ಟಾಕ್ ಮಾರ್ಕೆಟ್ ಇನ್ವೆಸ್ಟ್ ವ್ಯವಹಾರ ಮಾಡ್ತಿದ್ದ ರಾಜು ಎಂಬಾತನನ್ನು ಕಿಡ್ನಾಪ್ ಮಾಡಲಾಗಿದೆ.
ದೊಡ್ಡ ಕುಳ ಎಂದು ಕಿಡ್ನಾಪ್ ಮಾಡಿದ್ದ ಗ್ಯಾಂಗ್, ತೆಲಂಗಾಣ ಫಾರ್ಮ್‍ಹೌಸ್ ವೊಂದರಲ್ಲಿ ಕೂಡಿಟ್ಟು ಹಲ್ಲೆ ನಡೆಸಿದೆ. ಅಲ್ಲದೇ 5 ಕೋಟಿ ಹಣಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ರು. ಕಿಡ್ನಾಪ್ ಬಗ್ಗೆ ಹಲಸೂರು ಠಾಣೆಗೆ ರಾಜು ಸ್ನೇಹಿತ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಹಲಸೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಿಡ್ನಾಪ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಮಧ್ಯೆ ಕಿಡ್ನಾಪ್ ಆಗಿರೋ ರಾಜು ವಿರುದ್ಧ ತೆಲಂಗಾಣದಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ರಾಜುವನ್ನ ಸಿಸಿಎಸ್ ಪೊಲೀಸರು ಮುಂಬೈಯಿಂದ ಬಂಧಿಸಿ ಕರೆ ತಂದಿದ್ದರು. ಬಳಿಕ ವಂಚನೆ ಕೇಸ್‍ನಲ್ಲಿ ಜಾಮೀನು ಪಡೆದು ಬೆಂಗಳೂರಿನಲ್ಲಿ ಬಂದು ವಾಸವಾಗಿದ್ದ. ಕಿಡ್ನಾಪ್ ಆಗಿರೋ ರಾಜು ಮೂಲತಃ ತೆಲಂಗಾಣದವನಾಗಿದ್ದು, ಮಾಜಿ ಮುಖ್ಯಮಂತ್ರಿ ಜಗನ್ (Jagan Mohan Reddy) ಕುಟುಂಬದ ಹೆಸರು ಬಳಿಸಿಕೊಂಡು, ಕೆಲಸ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಿದ್ದಾನೆ ಅನ್ನೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಮಾತೃವಿಯೋಗ