ಬೆಂಗಳೂರು: ಶ್ವಾನವನ್ನು ವಾಕಿಂಗ್ ಕರೆದುಕೊಂಡು ಹೋಗುವಾಗ ಯುವಕನೊಬ್ಬ ತಲ್ವಾರ್ ಹಿಡಿದುಕೊಂಡು ಹೋದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಚಂದಾಪುರದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ರಸ್ತೆಯಲ್ಲಿ ಬೀದಿನಾಯಿಗಳು ಅಟ್ಯಾಕ್ ಮಾಡುವ ಭಯದಿಂದ ಯುವಕ ತಲ್ವಾರ್ ಹಿಡಿದುಕೊಂಡು ಹೋಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ಯುವಕ ಬೀದಿನಾಯಿಗಳ ಮೇಲೆ ತಲ್ವಾರ್ ನಿಂದ ಹಾನಿ ಮಾಡಿಲ್ಲ. ಆದರೂ ನಾಯಿಗಳನ್ನು ಹೊಡೆಯೋಕೆ ಈ ರೀತಿ ತಲ್ವಾರ್ ಹಿಡಿದುಕೊಂಡು ಹೋಗೋದು ಸರಿಯಲ್ಲ ಅಂತಾ ಪ್ರಾಣಿಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್