ಚಾಮರಾಜನಗರ: ಅದು ಎರಡು ವರ್ಷಗಳ ಹಿಂದೆ ಗ್ರಾಮದ ಜಾತ್ರೆಯಲ್ಲಿ ಆಗಿದ್ದ ಭೇಟಿ. ಆ ಒಂದು ಭೇಟಿಯೇ ಪ್ರೀತಿ ಮೊಳಕೆಯೊಡಲು ಕಾರಣವಾಯ್ತು. ಮದುವೆಯಾಗುವ ನಿರ್ಧಾರಕ್ಕೆ ಬಂದ ಆ ಪ್ರೇಮಿಗಳು ಸ್ವರ್ಗಕ್ಕೆ ಹತ್ತಿರ ಎಂಬಂತೆ ಓಡಾಡಿದರು. ಆದರೆ ಮದುವೆ ವಿಚಾರ ಮುನ್ನೆಲೆಗೆ ಬಂದಿದ್ದೆ ತಡ ಹುಡುಗ ಎಸ್ಕೇಪ್ ಆಗಿದ್ದಾನೆ.
Advertisement
ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಕೋಣನಕೆರೆ ಗ್ರಾಮದ ಈಕೆಯ ಹೆಸರು ದಿವ್ಯ(ಹೆಸರು ಬದಲಿಸಲಾಗಿದೆ). ಬುಡಕಟ್ಟು ಸೋಲಿಗ ಸಮುದಾಯಕ್ಕೆ ಸೇರಿದ ಈ ಯುವತಿ ಎರಡು ವರ್ಷಗಳ ಹಿಂದೆ ಪಕ್ಕದ ಊರು ಪೊನ್ನಾಚಿಯ ಪರಂಜ್ಯೋತಿ (25) ಎಂಬಾತನ ಪ್ರೇಮಪಾಶಕ್ಕೆ ಬಿದ್ದು ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
Advertisement
Advertisement
ನಿನ್ನನ್ನೆ ಮದುವೆ ಆಗ್ತಿನಿ, ನನ್ನದು ಪವಿತ್ರ ಪ್ರೇಮ ಎಂದೆಲ್ಲ ರೀಲು ಬಿಟ್ಟಿದ್ದ ಪರಂಜ್ಯೋತಿಯ ಮಾತಿಗೆ ಮರುಳಾಗಿದ್ದ ಯುವತಿ ಇದೀಗ ತನ್ನ ಜೀವನವನ್ನೇ ಹಾಳು ಮಾಡಿಕೊಂಡಿದ್ದಾಳೆ. ಹೇಗಿದ್ದರೂ ಮದುವೆ ಆಗೋ ಹುಡುಗ ಅಂತ ಆತನೊಂದಿಗೆ ಎಲ್ಲಾ ಕಡೆ ಸುತ್ತಾಡಿದ್ದಾಳೆ. ಆದರೆ ಈಗ ಪ್ರಿಯಕರ ಮದುವೆಗೆ ನಿರಾಕರಿಸಿದ್ದಾನೆ. ಇದನ್ನೂ ಓದಿ: ದೂರು ನೀಡಿದ್ದಕ್ಕೆ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್- ಮೂವರು ಅರೆಸ್ಟ್
Advertisement
ಬೆಂಗಳೂರಿನಲ್ಲಿ ಕಾರು ಡ್ರೈವರ್ ಆಗಿರುವ ಪರಂ ಜ್ಯೋತಿಗೆ ಆತನ ಮನೆಯವರು ಬೇರೆ ಹುಡುಗಿ ನೋಡಿದ್ದು, ನಿಶ್ಚಿತಾರ್ಥ ಸಹ ಆಗಿದೆ ಎನ್ನಲಾಗಿದೆ. ಈ ವಿಚಾರ ತಿಳಿದ ಯುವತಿ ಮನೆಯವರು ಯುವಕನ ಮನೆಗೆ ತೆರಳಿ ಮನವೊಲಿಸಿದ್ದಾರೆ. ನ್ಯಾಯ ಪಂಚಾಯಿತಿ ಮೂಲಕ ಮದುವೆಗೆ ಸಹ ಒಪ್ಪಿಸಿದ್ದಾರೆ. ಹಿರಿಯರ ಮಾತಿಗೆ ಒಪ್ಪಿದ್ದ ಆತನನ್ನು ವಿವಾಹ ನೋಂದಣಿ ಕಚೇರಿಗೆ ಕರುತ್ತಿದ್ದಾಗ ಎಲ್ಲರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ಒಟ್ಟಿನಲ್ಲಿ ತನಗೆ ನ್ಯಾಯ ದೊರೆಯಬೇಕು ಎಂದು ಯುವತಿ ಅಳಲು ತೋಡಿಕೊಂಡಿದ್ದಾಳೆ.
ಪ್ರೀತಿ ಕುರುಡು ಅಂತಾರಲ್ಲ ಹಾಗೆಯೇ ಆಗಿದೆ ಚಾಮರಾಜನಗರ ಜಿಲ್ಲೆಯಲ್ಲಿ. ಮದುವೆಯಾಗುತ್ತೇನೆ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿನಿ ಎಂದವನ ಮಾತಿಗೆ ಮರುಳಾದ ಯುವತಿ ಬಾಳು ಈಗ ಕಣ್ಣಿರಿನಲ್ಲಿ ಕೈ ತೊಳೆಯುವಂತಾಗಿದೆ. ಪ್ರೀತಿ, ಪ್ರೇಮದ ಅಮಲಿನಲ್ಲಿ ಬೀಳುವ ಮುನ್ನ ಎಚ್ಚರ ವಹಿಸುವುದು ಅಗತ್ಯವಾಗಿದೆ. ಇದನ್ನೂ ಓದಿ: ಕನ್ನಡದ ಕೋಟ್ಯಧಿಪತಿ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಆತ್ಮಹತ್ಯೆ : ಅನುಮಾನ ವ್ಯಕ್ತ ಪಡಿಸಿದ ಸ್ನೇಹಿತರು