ಚಿಕ್ಕಮಗಳೂರು: ಪ್ರವಾಸಕ್ಕೆ ಬಂದಿದ್ದ ಯುವಕ ಅನುಮಾನಾಸ್ಪದವಾಗಿ ಕಣ್ಮರೆಯಾಗಿರುವ (Missing) ಘಟನೆ ಮೂಡಿಗೆರೆ (Mudigere) ತಾಲೂಕಿನ ಪ್ರವಾಸಿ ತಾಣ ದೇವರಮನೆ (Devaramane) ಗುಡ್ಡದ ಬಳಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕೊಯ್ಯುರು ಗ್ರಾಮದ ದೀಕ್ಷಿತ್ (27) ನಾಪತ್ತೆಯಾದ ಯುವಕ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ನಾಲ್ವರು ಯುವಕರು ಪ್ರವಾಸಕ್ಕೆ ತೆರಳಿದ್ದು, ಈ ವೇಳೆ ಒಬ್ಬ ನಾಪತ್ತೆಯಾಗಿದ್ದಾನೆ.
- Advertisement
ಪ್ರವಾಸ ಮುಗಿಸಿ ವಾಪಸಾಗುತ್ತಿದ್ದ ವೇಳೆ ಯುವಕರು ಗುಡ್ಡೆತೋಟದ ಬಳಿ ಕಾರು ನಿಲ್ಲಿಸಿ ಜಗಳವಾಡಿಕೊಂಡಿದ್ದಾರೆ. ಈ ವೇಳೆ ದೀಕ್ಷಿತ್ ಮುನಿಸಿಕೊಂಡು ಕಾರು ಹತ್ತದೆ ಹೋಗಿದ್ದಾನೆ. ನಂತರ ಆತ ನಾಪತ್ತೆಯಾಗಿದ್ದಾನೆ. ಇದನ್ನೂ ಓದಿ: ಹೈಪರ್ ಟೆನ್ಷನ್, ಮೂಡ್ ಸ್ವಿಂಗ್ ಖಾಯಿಲೆಯಿಂದ ಬಳಲುತ್ತಿರೋ ಪತ್ನಿಯಿಂದ ಪತಿಗೆ ಕಿರುಕುಳ
- Advertisement
ಯುವಕ ನಿಗೂಢವಾಗಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಾತ್ರಿಯಿಡೀ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಯುವಕನಿಗಾಗಿ ಶೋಧ ನಡೆಸಿದ್ದಾರೆ. ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ದನಗಳ ಮೈ ತೊಳೆಯಲು ಹೋದ ರೈತ ನೀರು ಪಾಲು
Web Stories