ಶಿವಮೊಗ್ಗ: ಬೇಟೆಗೆ ತೆರಳಿದ್ದ ವೇಳೆ, ಬಂದೂಕು ಮಿಸ್ ಫೈರ್ ಆಗಿ ಯುವಕನೊಬ್ಬ ಸಾವಿಗೀಡಾದ ಘಟನೆ ತೀರ್ಥಹಳ್ಳಿಯ (Thirthahalli) ಕಟ್ಟೆಹಕ್ಲು ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಕೊಳಾವರ ಗ್ರಾಮದ ಗೌತಮ್ (25) ಎಂದು ಗುರುತಿಸಲಾಗಿದೆ. ಬೇಟೆಗೆಂದು ಹೋಗಿದ್ದ ಸಂದರ್ಭದಲ್ಲಿ ಪ್ರಾಣಿಯೊಂದನ್ನು ಹೊಡೆಯಲು ಹೋಗಿ ಮಿಸ್ ಫೈರ್ ಆಗಿದೆ. ಈ ವೇಳೆ ಯುವಕ ಸ್ಥಳದಲ್ಲೇ ಯುವಕ ಸಾವಿಗೀಡಾಗಿದ್ದಾನೆ. ಇದನ್ನೂ ಓದಿ: ಮೈಸೂರಲ್ಲಿ ಅನುಮಾನಾಸ್ಪದವಾಗಿ ಯುವತಿಯ ಶವ ಪತ್ತೆ – ರೇಪ್ & ಮರ್ಡರ್ ಶಂಕೆ
ಯುವಕರ ಗುಂಪು ಕಟ್ಟೆಹಕ್ಲುಗೆ ಬೇಟೆಗಾಗಿ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಗೂ ಮುಂಚೆಯೇ ಪಾಕ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೆ – ತಪ್ಪೊಪ್ಪಿಕೊಂಡ ಜ್ಯೋತಿ ಮಲ್ಹೋತ್ರಾ