ಇಸ್ಲಾಮಾಬಾದ್: ಕರಾಚಿ ಮಾಲ್‍ವೊಂದರಲ್ಲಿ ಪಂಜಾಬಿ ಹಾಡಿಗೆ ಪಾಕಿಸ್ತಾನಿ ಯುವಕನೊಬ್ಬ ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೋ ಫೇಸ್‍ಬುಕ್ ನಲ್ಲಿ ವೈರಲ್ ಆಗಿದ್ದು ಸಾಕಷ್ಟು ಜನರ ಮೆಚ್ಚುಗೆಯನ್ನ ಪಡೆದಿದೆ.
ಪಾಕಿಸ್ತಾನಿ ಮೂಲದ ಮೆಹರೋಜ್ ಬೇಗ್ ಬೇಬಿ ಪಿಂಕ್ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿಕೊಂಡು ಹೈಪಸ್ರ್ಟಾರ್ ಮಾಲ್‍ವೊಂದರಲ್ಲಿ ‘ಲಾಂಗ್ ಲಾಚಿ’ ಎಂಬ ಪಂಜಾಬಿ ಹಾಡಿಗೆ ಕುಣಿದ ವಿಡಿಯೋ ವೈರಲ್ ಆಗಿ ಸುಮಾರು 6.8 ಲಕ್ಷಕ್ಕೂ ವೀಕ್ಷಣೆಯನ್ನ ಪಡೆದುಕೊಂಡಿದೆ.
ಅವರು ಪೊಸ್ಟ್ ಮಾಡಿರುವ ಶೀರ್ಷಿಕೆಯನ್ನ ನೋಡಿದರೆ ಡ್ಯಾನ್ಸ್ ಪ್ರದರ್ಶನವು ಒಂದು ಧೈರ್ಯದ ಮಾತು ಎಂಬುದು ತಿಳಿದಿದೆ. ಒಬ್ಬ ವಿದ್ಯಾರ್ಥಿಯಾಗಿರುವ ಬೇಗ್ ನೃತ್ಯವನ್ನು ಎಷ್ಟು ಇಷ್ಟಪಡುತ್ತಾರೆ ಹಾಗೂ ಎಷ್ಟು ಪ್ರೀತಿಸುತ್ತಾರೆ ಎಂಬುದು ಅವರ ಫೇಸ್‍ಬುಕ್ ಪೋಸ್ಟ್ ನಿಂದ ತಿಳಿಯುತ್ತದೆ.
ಅವರ ಈ ಸೂಪರ್ ಡ್ಯಾನ್ಸ್ ನ್ನು ವೀಕ್ಷಿಸಿದ ಜನರು ಸಾಕಷ್ಟು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಕಮೆಂಟ್ಸ್ ಇಲ್ಲಿದೆ ನೋಡಿ,
ಫಹಾದ್ ಬಶೀರ್-” ಅದ್ಭುತ ಮೆಹರೋಝ್ ಬೇಗ್, ಪಾಕಿಸ್ತಾನದಲ್ಲಿ ಈ ರೀತಿಯ ನಡೆಯುವುದು ತುಂಬ ಸಹಜ, ಇದೇ ರೀತಿ ಎಲ್ಲರನ್ನ ಆನಂದಿಸುತ್ತ ಎಲ್ಲರಲ್ಲಿ ಸಂತೋಷವನ್ನು ಹರಡಿ”
ಮಹೆಕ್ ನಬೀಲ್-“ಎಂತಹ ಪೋಸಿಟಿವ್ ಡ್ಯಾನ್ಸ್, ನಿಮ್ಮ ನಗು ಹಾಗೂ ಖುಷಿ ನಿಮ್ಮ ನೃತ್ಯವನ್ನ ಇನ್ನಷ್ಟು ಅದ್ಭುತಗೊಳಿಸಿದೆ. ಗುಡ್ ಜಾಬ್, ನಿಮ್ಮ ಈ ನೃತ್ಯದಿಂದ ಎಲ್ಲರೂ ಖುಷಿಪಡುತ್ತಾರೆ. ಸೂಪರ್ ಎಸ್.ಐ.ಸಿ”.
ಸನಂ ಫಹೀಮ್-” ನಾನು ಇಲ್ಲಿಯವರೆಗೆ ಕಂಡ ಡ್ಯಾನ್ಸ್ ಗಳಲ್ಲಿ ಇದು ಅದ್ಭುತವಾದ ನೃತ್ಯ! ಹೀಗೆ ಮುಂದುವರೆಸಿ”