ಚಿಕ್ಕಬಳ್ಳಾಪುರ: ಪ್ರೀತಿಸಿದ ಯುವತಿ ಕೈಕೊಟ್ಟ ಹಿನ್ನೆಲೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಡಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಾಲಾಜಿ (25) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ. ಕಳೆದ ಒಂದು ವರ್ಷದ ಹಿಂದೆ ಬಾಲಾಜಿಗೆ ಇನ್‌ಸ್ಟಾಗ್ರಾಂ (Instagram) ಮೂಲಕ ಮಂಡ್ಯ ಮೂಲದ ಯುವತಿಯ ಪರಿಚಯವಾಗುತ್ತದೆ. ಪರಿಚಯವು ಕ್ರಮೇಣ ಪ್ರೀತಿಗೆ ತಿರುಗಿದೆ. ಹೀಗಾಗಿ ಇಬ್ಬರು ಸಲುಗೆಯಿಂದ ತಿರುಗಾಡಿದ್ದಾರೆ.
ಆದರೆ ಇದೀಗ ಇದ್ದಕ್ಕಿದ್ದಂತೆ ಯುವತಿ, ತಾನು ಬೇರೊಬ್ಬ ಯುವಕನ ಜೊತೆ ಪ್ರೀತಿಯಲ್ಲಿ ಇರುವುದಾಗಿ ತಿಳಿಸಿದ್ದಾಳಂತೆ. ಇದರಿಂದ ಮನನೊಂದ ಬಾಲಾಜಿ, ಕಾಳು ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ದೊಡ್ಡಬಳ್ಳಾಪುರ (Doddaballpur) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತ ಯುವಕನ ಶವವನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಮೃತನ ಸಂಬಂಧಿಕರ ಹಾಗೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.