– ಇದು ವಿಜಯಪುರದ ಲವ್ ಸೆಕ್ಸ್ ದೋಖಾ ಕಥೆ
– 10 ಲಕ್ಷ ಬೇಡಿಕೆ ಇಟ್ಟಿದ್ದಾಳೆ ಎಂದ ಯುವಕ
ವಿಜಯಪುರ: ಇತ್ತೀಚಿನ ದಿನಗಳಲ್ಲಿ ಪ್ರೀತಿ, ಪ್ರೇಮದ ಹೆಸರಿನಲ್ಲಿ ಮೋಸ ಹೋಗುವವರು ಹೆಚ್ಚಾಗಿದ್ದಾರೆ. ಈಗ ಅಂತಹ ಘಟನೆ ವಿಜಯಪುರದಲ್ಲಿ ನಡೆದಿದೆ.
ಪರಶುರಾಮ ಪ್ರೀತಿ ಹೆಸರಿನಲ್ಲಿ ಯುವತಿ ಕವಿತಾ(ಹೆಸರು ಬದಲಾಯಿಸಲಾಗಿದೆ) ಗೆ ಮೋಸ ಮಾಡಿದ್ದಾನೆ. ಇವರಿಬ್ಬರು ವಿಜಯಪುರದ ನಿವಾಸಿಗಳಾಗಿದ್ದು, ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ. ಎಲ್ಲಾ ಪ್ರೇಮಿಗಳ ಹಾಗೆ ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡಿದ್ದರು. ಇನ್ನು ಪರಶುರಾಮ ತನ್ನ ಹುಡುಗಿಯ ಪರೀಕ್ಷೆ ಶುಲ್ಕವನ್ನು ಕಟ್ಟಲು ಸಹಾಯ ಮಾಡಿದ್ದನು. ಕೊನೆಗೆ ಇವರಿಬ್ಬರು ದೈಹಿಕವಾಗಿಯು ಒಂದಾಗಿದ್ದಾರೆ.
ಮೂರು ವರ್ಷಗಳಲ್ಲಿ ಅನೇಕ ಬಾರಿ ಇವರಿಬ್ಬರು ಜೊತೆಯಲ್ಲಿ ದೈಹಿಕವಾಗಿ ಕಾಲ ಕಳೆದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ಪ್ರೀತಿಯಲ್ಲಿ ಚಿಕ್ಕದಾಗಿ ಬಿರುಕು ಕಾಣಿಸಿಕೊಂಡಿತ್ತು. ಅಪನಂಬಿಕೆ ಶುರುವಾಗಿ ಇಬ್ಬರು ಜಗಳವಾಡಿಕೊಂಡಿದ್ದಾರೆ. ಇತ್ತ ಪರಶುರಾಮ ನನಗೆ ನೀನು ಬೇಡ ಎಂದು ಹೇಳಿ ಎಂದು ದೂರ ತಳ್ಳಿದ್ದಾನೆ. ಇದರಿಂದ ನೊಂದ ಯುವತಿ ಕವಿತಾ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಪರಶುರಾಮ ಹೇಳೋದು ಏನು?
ಕವಿತಾ ನರ್ಸಿಂಗ್ ಮುಗಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಗೂ ಹತ್ತಾರು ಜನರು ಪರಿಚಯ ಇದ್ದಾರೆ. ಕೆಲಸದ ಸಮಯದಲ್ಲಿ ಬೇರೊಬ್ಬರ ಜೊತೆ ಗಂಟೆಗಟ್ಟಲೆ ಫೋನಿನಲ್ಲಿ ಕಾಲ ಕಳೆದಿದ್ದಾಳೆ. ಇದು ನನಗೆ ಬೇಸರ ತಂದಿದೆ ಎಂದು ಪರಶುರಾಮ ಆರೋಪಿಸಿದ್ದಾನೆ.
ನಾನು ಕವಿತಾ ಮೊಬೈಲ್ ಚೆಕ್ ಮಾಡಿದ್ದೇನೆ. ಆಗ ಆಕೆ ಬೇರೆ ಯುವಕನ ಜೊತೆ ವಿಡಿಯೋ ಕಾಲ್ ಮಾಡಿ ಮಾತಾಡಿದ್ದು, ಅರೆನಗ್ನ ಫೋಟೋಗಳನ್ನ ಕಳಿಸಿದ್ದು ನನ್ನ ಗಮನಕ್ಕೆ ಬಂದ ಕಾರಣ ನಾನು ದೂರವಾಗಿದ್ದೇನೆ. ನಂತರ ಆಕೆ ಕ್ಷಮೆಯಾಚಿಸಿ ಮತ್ತೆ ಈ ತಪ್ಪು ಮಾಡಲ್ಲ ಎಂದಿದ್ದಳು. ನಾನು ಬೇರೆ ಮದುವೆಯಾಗುತ್ತಿರುವ ವಿಚಾರ ಗೊತ್ತಾದ ಮೇಲೆ ಕವಿತಾ ನನ್ನ ಮೇಲೆ ವಿರುದ್ಧ ಕಿಡಿಕಾರಿ ಠಾಣೆ ಮೆಟ್ಟಿಲೇರಿದ್ದಾಳೆ. ಪ್ರಕರಣ ದಾಖಲು ಮಾಡಲು ನಿರ್ಧರಿಸಿದ್ದು, 10 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾಳೆ ಎಂದು ಪರಶುರಾಮ ಈಗ ಆರೋಪ ಮಾಡಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv