ತುಮಕೂರು: ಗುರಾಯಿಸಿದ್ದಾನೆಂದು ಆರೋಪಿಸಿ ಯುವಕನಿಗೆ 15 ಮಂದಿ ಯುವಕರಿದ್ದ ತಂಡ ಹಿಗ್ಗಾಮುಗ್ಗಾ ಥಳಿಸಿದ ಘಟನೆ ತುಮಕೂರು (Tumakuru) ನಗರದ ಬನಶಂಕರಿ (Banashankari) ಬಳಿ ನಡೆದಿದೆ.
ಕುಶಾಲ್ (23) ಹಲ್ಲೆಗೆ ಒಳಗಾದ ಯುವಕ. ಕುಶಾಲ್ ಬನಶಂಕರಿ 2 ನೇ ಹಂತದ ಮರಳೂರು ದಿಣ್ಣೆ ಬಳಿ ನಿವಾಸಿಯಾಗಿದ್ದಾನೆ. ಬನಶಂಕರಿ ಬಳಿಯಿರುವ ಬಾಬಾ ಕೆಫೆ ಬಳಿ ಟೀ ಕುಡಿಯಲು ಹೋಗಿದ್ದ ವೇಳೆ ಕುಶಾಲ್ ಮೇಲೆ ಸುಮಾರು 15 ಯುವಕರಿದ್ದ ತಂಡ ಏಕಾಏಕಿ ಹಲ್ಲೆ ನಡೆಸಿದೆ. ನವೆಂಬರ್ 21ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮನಬಂದಂತೆ ಥಳಿಸುತ್ತಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ವಕ್ಫ್ ಆಸ್ತಿ ಭೂಕಬಳಿಕೆ ಹೆಚ್ಚಿದ್ದಕ್ಕೆ ಬಿಜೆಪಿಯಿಂದ ಹೆಚ್ಚು ನೋಟಿಸ್ ನೀಡಲಾಗಿದೆ – ಕುಮಾರ್ ಬಂಗಾರಪ್ಪ
ಹಲ್ಲೆಗೆ ಒಳಗಾದ ಕುಶಾಲ್ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ನಾನು ಟೀ ಕುಡಿಯುತ್ತಿದ್ದ ವೇಳೆ 15 ಜನರು ಹಲ್ಲೆ ಮಾಡಿದ್ದಾರೆ. ಏಕಾಏಕಿ ಬಂದು ಗುರಾಯಿಸುತ್ತೀಯಾ ಎಂದು 15 ಜನರ ಯುವಕರು ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಇದನ್ನೂ ಓದಿ: ಸುತ್ತಿಗೆಯಿಂದ ತಲೆಗೆ ಹೊಡೆದು ಮಗನಿಂದಲೇ ತಂದೆಯ ಹತ್ಯೆ