ಶಿವಮೊಗ್ಗ: ನಗರದ ಹಲವೆಡೆ ಅನುಮಾನಾಸ್ಪದವಾಗಿ ಓಡಾಡಿಕೊಂಡಿದ್ದ ಯುವಕ (Young Man) ಹಾಗೂ ಬುರ್ಖಾ ಹಾಕಿಕೊಂಡಿದ್ದ ಯುವತಿಯನ್ನು (Young Woman) ಪೊಲೀಸರು ಇಂದು ವಶಕ್ಕೆ ಪಡೆದುಕೊಂಡಿದ್ದಾರೆ.
ನಾವು ಕಾಶ್ಮೀರದಿಂದ ಬಂದಿದ್ದೇವೆ, ನಮಗೆ ಸಹಾಯ ಮಾಡಿ ಎಂದುಕೊಂಡು ಯುವಕ ಹಾಗೂ ಯುವತಿ ಮನೆ ಮನೆಗೆ ತೆರಳಿ ಬೇಡುತ್ತಿದ್ದರು. ಶಿವಮೊಗ್ಗದ ಇಲಿಯಾಸ್ ನಗರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡಿಕೊಂಡಿದ್ದ ಯುವಕ ಹಾಗೂ ಯುವತಿಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಂಗ್ಲಿಷ್ ಮೀಡಿಯಂ ಶಾಲೆಗಳ ಪರ ರಾಹುಲ್ ಗಾಂಧಿ ಬ್ಯಾಟಿಂಗ್
ಸ್ಥಳೀಯರ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರನ್ನು ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸುನಿಲ್ ಕುಮಾರ್ ವಿರುದ್ಧ ಸಿಡಿದ ಹಿಂದೂ ಕಾರ್ಯಕರ್ತರು