ನವದೆಹಲಿ: 2018ರ ಅಂಡರ್-19 ವಿಶ್ವಕಪ್ ಫೈನಲ್‍ನಲ್ಲಿ ಶತಕ ಸಿಡಿಸಿದ್ದ ಆಟಗಾರ ಮಂಜೋತ್ ಕಾಲ್ರಾ ರಣಜಿ ಕ್ರಿಕೆಟ್‍ಗೆ 1 ವರ್ಷ ನಿಷೇಧವನ್ನು ಎದುರಿಸಿದ್ದಾರೆ. ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಬೋರ್ಡ್ (ಡಿಡಿಸಿಎ) ನಿಷೇಧವನ್ನು ವಿಧಿಸಿದ್ದು, ವಯಸ್ಸಿನ ತಪ್ಪು ಪ್ರಮಾಣ ಪತ್ರ ನೀಡಿ ವಯಸ್ಸನ್ನು ಮರೆಮಾಚಿದ ಆರೋಪವನ್ನು ಮಂಜೀತ್ ಕಾಲ್ರಾ ಎದುರಿಸುತ್ತಿದ್ದಾರೆ.
ಎಡಗೈ ಬ್ಯಾಟ್ಸ್ ಮನ್ ಆಗಿರುವ ಮಂಜೋತ್ ಕಾಲ್ರಾ ಅಂಡರ್-19 ವಿಶ್ವಕಪ್ ನಲ್ಲಿ ಭಾರತ ತಂಡದ ಪರ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆದರೆ ಕಾಲ್ರಾ ತಮ್ಮ ಅಂಡರ್-16 ಹಾಗೂ ಅಂಡರ್-19 ಕ್ರಿಕೆಟ್ ಆಡುವ ವೇಳೆ ಡೆಲ್ಲಿ ಸಂಸ್ಥೆಗೆ ನಕಲಿ ಪ್ರಮಾಣ ಪತ್ರ ನೀಡಿದ್ದರು.
Advertisement
ಇಂತಹದ್ದೇ ಅಪರಾಧದಲ್ಲಿ ದೆಹಲಿ ತಂಡದ ಉಪನಾಯಕ ನಿತೀಶ್ ರಾಣಾ ಅವರಿಗೆ ಯಾವುದೇ ಶಿಕ್ಷೆಯಾಗಿಲ್ಲ. ಶಿಸ್ತುಕ್ರಮದಿಂದ ಅವರಿಗೆ ವಿನಾಯಿತಿ ನೀಡಿ, ಹೆಚ್ಚಿನ ದಾಖಲೆಗಳನ್ನು ನೀಡಲು ಕೋರಲಾಗಿತ್ತು.
Advertisement
Advertisement
ಡೆಲ್ಲಿ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗಿದ್ದ ನಿವೃತ್ತ ನ್ಯಾಯಮೂರ್ತಿ, ಬಾದರ್ ದುರಾಜ್ ಅಹ್ಮದ್ ಅವರು ತಮ್ಮ ಅಂತಿಮ ದಿನದಂದು ಆದೇಶವನ್ನು ಜಾರಿ ಮಾಡಿದ್ದಾರೆ. ಆದೇಶದ ಅನ್ವಯ ಕಾಲ್ರಾ 1 ವರ್ಷ ರಣಜಿ ಕ್ರಿಕೆಟ್ ಪಂದ್ಯಗಳನ್ನು ಆಡುವಂತಿಲ್ಲ. ಅಲ್ಲದೇ ಅಂಡರ್-23 ಕ್ರಿಕೆಟ್‍ಗೆ 2 ವರ್ಷ ನಿಷೇಧ ಮಾಡಲಾಗಿದೆ.
Advertisement
ಬಿಸಿಸಿಐ ಮಾಹಿತಿಯ ಅನ್ವಯ ಕಾಲ್ರಾ 20 ವರ್ಷ, 351 ದಿನ ವಯಸ್ಸಾಗಿದ್ದು, ಕಳೆದ ವಾರ ಅಂಡರ್-23 ರಲ್ಲಿ ದೆಹಲಿ ತಂಡದಲ್ಲಿ ಬಂಗಾಳದ ವಿರುದ್ಧ ನಡೆದ ಪಂದ್ಯದಲ್ಲಿ ಭಾಗವಹಿಸಿದ್ದರು. ಈ ಪಂದ್ಯದಲ್ಲಿ ಕಾಲ್ರಾ 80 ರನ್ ಗಳಿಸಿದ್ದರು. ದೆಹಲಿ ತಂಡದಲ್ಲಿ ಶಿಖರ್ ಧವನ್ ಅವರ ಸ್ಥಾನವನ್ನು ರೀ-ಪ್ಲೇಸ್ ಮಾಡುವ ಎಂಬ ಭರವಸೆಯನ್ನು ಮೂಡಿಸಿದ್ದರು. ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯರಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡೆಲ್ಲಿ ಕ್ರಿಕೆಟ್ ಮಂಡಳಿಯ ಪ್ರಧಾನ ಕಾರ್ಯದರ್ಶಿ ವಿನೋದ್ ತಿಹರಾ, ಈ ಹಿಂದೆ ನಿತೀಶ್ ರಾಣಾ ಎಂದು ಅಪರಾಧಿ ಎಂದು ಹೇಳಲಾಗದ ಅದೇ ಅಪರಾಧಕ್ಕೆ ಕಾಲ್ರಾ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಇದು ತಮಗೆ ಅಚ್ಚರಿಯನ್ನು ತಂದಿದ್ದು, ಬಾದರ್ ದುರಾಜ್ ಅಹ್ಮದ್ ಅವರು ತಮ್ಮ ಕರ್ತವ್ಯದ ಅಂತಿಮ ದಿನದ ರಾತ್ರಿ 11:30ರ ಮೊದಲು ಈ ಆದೇಶವನ್ನು ನೀಡಿದ್ದಾರೆ. ಈಗ ಇದು ಸ್ವಲ್ಪ ವಿಲಕ್ಷಣವಾಗಿ ಕಾಣುತ್ತಿದೆ. ಆದರೆ ಈ ಹುದ್ದೆಗೆ ಹೊಸಬರು ನೇಮಕವಾಗಿ ಕಾಲ್ರಾ ಮೇಲಿನ ನಿಷೇಧವನ್ನು ತೆರವು ಮಾಡುವವರೆಗೂ ನಾವು ಆತನನ್ನು ತಂಡಕ್ಕೆ ಪರಿಗಣಿಸಲು ಸಾಧ್ಯವಿಲ್ಲ. ನಾವು ಅಸಹಾಯಕರಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.