ತಲ್ಲಾಹಸಿ: ಕಾಂಡೋಮ್ ಇಲ್ಲದೇ ಸೆಕ್ಸ್ಗೆ ಒಪ್ಪದ ಯುವತಿಗೆ ಗನ್ ತೋರಿಸಿ ಅತ್ಯಾಚಾರಗೈದು, ಆಕೆಯಿಂದ ಹಣ ದೋಚಿರುವ ಘಟನೆ ದಕ್ಷಿಣ ಫ್ಲೋರಿಡಾದಲ್ಲಿ ನಡೆದಿದೆ. ಮೂರು ವಾರಗಳಲ್ಲಿ ಇದೇ ರೀತಿಯಲ್ಲಿ ಮೂರು ಘಟನೆಗಳು ನಡೆದಿದ್ದು, ಪೊಲೀಸರು ಶಂಕಿತ ಆರೋಪಿಯ ಚಲನವಲನದ ವಿಡಿಯೋವನ್ನು ಬಿಡುಗಡೆಗೊಳಿಸಿದ್ದಾರೆ. ಒರ್ವನೇ ಈ ಮೂರು ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ದಕ್ಷಿಣ ಫ್ಲೋರಿಡಾದ ದನಿಯಾ ಬೀಚ್, ದೋರಲ್ ಮತ್ತು ಮಿಯಾಮಿ ಬೀಚ್ ಗಳಲ್ಲಿ ಅತ್ಯಾಚಾರ, ದರೋಡೆ ಪ್ರಕರಣಗಳು ದಾಖಲಾಗಿವೆ. ಮಿಯಾಮಿ ಬೀಚ್ ಪೊಲೀಸರು ಶಂಕಿತ ಆರೋಪಿ ಹೋಟೆಲ್ ಪ್ರವೇಶದ ಕೆಲ ದೃಶ್ಯಗಳನ್ನು ಬಿಡುಗಡೆಗೊಳಿಸಿದ್ದಾರೆ.
ಆತನೊಂದಿಗೆ ಸೆಕ್ಸ್ಗೆ ಮೊದಲು ಒಪ್ಪಿಕೊಂಡಿದ್ದೆ. ಕಾಂಡೋಮ್ ಇಲ್ಲದೇ ಆತ ಸೆಕ್ಸ್ಗೆ ಮುಂದಾದಾಗ ನಾನು ವಿರೋಧಿಸಿದೆ. ಈ ವೇಳೆ ಆತ ಗನ್ ತೋರಿಸಿ ಅತ್ಯಾಚಾರಗೈದು, ನನ್ನ ಬಳಿಯಲ್ಲಿದ್ದ ಹಣ ದೋಚಿಕೊಂಡು ಪರಾರಿಯಾದ ಎಂದು ಸಂತ್ರಸ್ತ ಮಹಿಳೆ ಪೊಲೀಸರ ಮುಂದೆ ತಿಳಿಸಿದ್ದಾಳೆ.
ಮೂವರು ಮಹಿಳೆಯರು ಆತನನ್ನೇ ಹೇಗೆ ಸಂಪರ್ಕಿಸಿದ್ರೂ ಎಂಬ ಮಾಹಿತಿ ಲಭ್ಯವಾಗಿಲ್ಲ. ಇಬ್ಬರು ಮಧ್ಯಾಹ್ನ ಮತ್ತು ಒಬ್ಬರು ಮಧ್ಯರಾತ್ರಿಯಲ್ಲಿ ಭೇಟಿಯಾಗಿದ್ದಾರೆ. ಮೂರು ಪ್ರಕರಣಗಳಲ್ಲಿ ಸಾಮ್ಯತೆ ಕಂಡು ಬಂದಿದ್ದು, ಎರಡಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳು ಲಭ್ಯವಾಗಿಲ್ಲ.