ಬೆಂಗಳೂರು: ಘಟಾನುಘಟಿಗಳ ಫಿಟ್ನೆಸ್ ಚಾಲೆಂಜ್‍ಗಳ ನಡುವೆ ನಗರದ 1 ವರ್ಷದ ಪುಟ್ಟ ಪೋರಿಯ ಫಿಟ್ನೆಸ್ ಚಾಲೆಂಜ್ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಬೆಂಗಳೂರು ನಗರ ಪೊಲೀಸ್ ವಿಭಾಗದ ಸಾಮಾಜಿಕ ಜಾಲತಾಣ ಕೇಂದ್ರದಲ್ಲಿ ಕಾರ್ಯನಿರ್ವಸುತ್ತಿರುವ ಹೆಚ್ ಎಂ ಲೋಕೇಶ್ ಎಂಬುವರ ಪುತ್ರಿ ಜಾಗೃತಿ ಶ್ರೀ ಆರ್ವಿಯು ಸೋಶಿಯಲ್ ಮಿಡಿಯಾಗಳಲ್ಲಿ ಸದ್ದು ಮಾಡುತ್ತಿರುವ ಪೋರಿ. ಗುರುವಾರ ನಡೆದ ಅಂತರಾಷ್ಟ್ರೀಯ ಯೋಗ ದಿನದಂದು ಈ ಪೋರಿಯು ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದಾಳೆ.
Advertisement
My little angel, Jagruthi Sriarvi ONE year old accepted the #FitnessChallenge on this #InternationalYogaDay2018
Lil Jagu with tiny fingers & tiny toes, bending and curling, rounding and showing her Asanas. Inspired herself and Inspiring others with her little moves…!!! pic.twitter.com/BsvoWOrc12
— BCP MAN (@HMLokesh) June 21, 2018
Advertisement
ಫಿಟ್ನೆಸ್ ಕುರಿತು ಪೋರಿಯು ತನ್ನ ಪುಟಾಣಿ ಕೈಗಳ ಮೂಲಕ ಡಿಪ್ಸ್ ಹೊಡೆದು, ಯೋಗದ ಕೆಲವು ಭಂಗಿಗಳನ್ನು ಪ್ರದರ್ಶಿಸಿದ್ದಾಳೆ. ಇದನ್ನು ಆಕೆಯ ತಂದೆಯು ಸೋಶಿಯಲ್ ಮಿಡಿಯಾಗಳಲ್ಲಿ ಹಾಕಿದ್ದಾರೆ. ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
Advertisement
ಕೇವಲ ಘಟಾನುಘಟಿಗಳು ಮಾತ್ರವೇ ಫಿಟ್ನೆಸ್ ಚಾಲೆಂಜ್ ತೆಗೆದುಕೊಂಡು ಸುದ್ದಿಯಾಗಿದ್ದರು. ಈ ಪುಟ್ಟ ಪೋರಿಯ ವಿಡಿಯೋ ಸಾಕಷ್ಟು ಜನರಿಗೆ ಇಷ್ಟವಾಗಿದ್ದು, ಪೋರಿಯ ಈ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಲೋಕೇಶ್ ಅವರ ಟ್ವೀಟನ್ನು 1 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು, 160 ಮಂದಿ ರಿ ಟ್ವೀಟ್ ಮಾಡಿದ್ದಾರೆ.