ಮೈಸೂರು: ಪ್ರೀತಿಸಿದ ಹುಡುಗ ಮತ್ತೊಬ್ಬಳ ಹಿಂದೆ ಸುತ್ತಾಡಿದ ಹಿನ್ನೆಲೆಯಲ್ಲಿ ಯುವತಿ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಕೆ.ಆರ್ ನಗರ (KR Nagar) ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ನಿಸರ್ಗ(20) ಎಂದು ಗುರುತಿಸಲಾಗಿದೆ. ಈಕೆ ಇಲಿ ಪಾಷಾಣ ತಿಂದು ಆಸ್ಪತ್ರೆ ಸೇರಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಬಸ್‍ನಲ್ಲಿ ಪ್ರಯಾಣಿಸುತ್ತಿದ್ದವನಿಗೆ ಬಡಿದ ಮರದ ಕೊಂಬೆ- ವ್ಯಕ್ತಿ ದಾರುಣ ಸಾವು
ಏನಿದು ಪ್ರಕರಣ?: ನಿಸರ್ಗ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಈಕೆ ಅದೇ ಕಾಲೇಜಿನಲ್ಲಿ ಓದುತ್ತಿರುವ ಸುಹಾಸ್ ರೆಡ್ಡಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ನಾಲ್ಕು ವರ್ಷಗಳ ಕಾಲ ಈ ಜೋಡಿ ಊರೂರು ಸುತ್ತಾಡಿದೆ. ನಂತರ ಸುಹಾಸ್ ಗೆ ಅನನ್ಯಾ ಎಂಬ ಮತ್ತೊಬ್ಬಳ ಜೊತೆ ಲವ್ ಆಗಿದೆ. ಈ ವಿಚಾರ ತಿಳಿದಾಗಿನಿಂದ ನಿಸರ್ಗ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು.
ಕೈ ಕೊಯ್ದುಕೊಂಡು ಸಾಮಾಜಿಕ ಜಾಲಾತಾಣದಲ್ಲಿ ಫೋಟೋ ಹಾಕಿದ್ದಳು. ಪ್ರೀತಿ ವಿಚಾರವನ್ನ ಅನನ್ಯಾಳ ಪೋಷಕರಿಗೆ ನಿರ್ಸಗ ತಿಳಿಸಿದ್ದಾಳೆ. ಅನನ್ಯಾ ಪೋಷಕರು ಕೆಟ್ಟದಾಗಿ ನಿಂದಿಸಿ ಸಾಯುವಂತೆ ಪ್ರೇರಣೆ ಕೊಟ್ಟಿದ್ದಾರೆ ಎಂದು ಡೆತ್‍ನೋಟ್ ಬರೆದಿಟ್ಟು ಬ್ಯಾಗ್‍ನಲಿಟ್ಟುಕೊಂಡು ನಿಸರ್ಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೆ.ಆರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಸುಹಾಸ್ ರೆಡ್ಡಿ, ಅನನ್ಯಾ ಪೋಷಕರ ಸೇರಿದಂತೆ ಐವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ನಿಸರ್ಗ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ಸುಹಾಸ್ ರೆಡ್ಡಿ ಎಸ್ಕೇಪ್ ಆಗಿದ್ದಾನೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]