ಮಂಗಳೂರು: ಅಪ್ರಾಪ್ತ ಹುಡುಗಿಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಲ್ಲದೆ ಅದನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯನ್ನು ಮಹಿಳೆಯೊಬ್ಬಳು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕೇರಳ ಮೂಲದ 65 ವರ್ಷದ ಶಶಿ ಎಂಬಾತ ಸಿಕ್ಕಿಬಿದ್ದ ವ್ಯಕ್ತಿ. ಹಲವು ವರ್ಷಗಳಿಂದ ಯುವತಿಯರನ್ನು ಹಣದಾಸೆ ತೋರಿಸಿ, ಕಾಮದಾಟ ನಡೆಸುತ್ತಿದ್ದ ಈತ, ಅದನ್ನು ಕ್ಯಾಮೆರಾ ಇಟ್ಟು ಚಿತ್ರೀಕರಿಸುತ್ತಿದ್ದ. ಈ ಬಗ್ಗೆ ತಿಳಿದುಕೊಂಡ ಯುವತಿಯೊಬ್ಬಳು ಕ್ಯಾಮೆರಾ ಚಿಪ್ ತೆಗೆದು, ಮಂಗಳೂರಿನ ಬಿಜೆಪಿ ಕಾರ್ಯಕರ್ತೆ ಶ್ರೀಲತಾ ಎಂಬವರಿಗೆ ನೀಡಿದ್ದಳು. ಹೀಗಾಗಿ ಶ್ರೀಲತಾ ಶಶಿಯನ್ನು ಟ್ರ್ಯಾಪ್ ಮಾಡಿ, ಹಿಡಿದು ಕದ್ರಿ ಪೊಲೀಸರಿಗೆ ಒಪ್ಪಿಸಿದ್ದಾಳೆ.
ಕದ್ರಿ ಪೊಲೀಸರು ಆತನನ್ನು ವಿಚಾರಣೆ ಮಾಡದೆ ನಿರ್ಲಕ್ಷ್ಯ ತೋರಿದ್ದು ಬಂಧಿಸದೆ ಬಿಟ್ಟು ಬಿಟ್ಟಿದ್ದಾರೆ. ಇದೇ ವೇಳೆ, ಶಶಿ ಬರ್ಕೆ ಠಾಣೆಯಲ್ಲಿ ಶ್ರೀಲತಾ ವಿರುದ್ಧ ದರೋಡೆ ದೂರು ದಾಖಲಿಸಿದ್ದಾನೆ. ಆದರೆ, 15 ಕ್ಕೂ ಹೆಚ್ಚು ಯುವತಿಯರನ್ನು ಕಾಮದಾಟಕ್ಕೆ ಬಳಸಿಕೊಂಡು ವಿಡಿಯೋದಲ್ಲಿದ್ದರೂ, ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು ಯಾಕೆ ಅನ್ನುವ ಪ್ರಶ್ನೆ ಎದುರಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv