ಬೀದರ್: ಕೃಷಿ ಚಟುವಟಿಕೆಗಾಗಿ ಜಮೀನಿಗೆ ಹೋಗಿದ್ದಾಗ ಸಿಡಿಲು (Lightning) ಬಡಿದು ಯುವರೈತ (Young Farmer) ಸಾವನ್ನಪ್ಪಿದ ದಾರುಣ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಬಾದಲಗಾಂವ ಗ್ರಾಮದಲ್ಲಿ ನಡೆದಿದೆ.
ರಾಹುಲ್ ಭಾಸ್ಕರ್ (25) ಸಿಡಿಲಿಗೆ ಬಲಿಯಾದ ಯುವರೈತ. ಕೆಲಸದ ನಿಮಿತ್ತ ರಾಹುಲ್ ತಮ್ಮ ಜಮೀನಿಗೆ ತೆರಳಿದ್ದ ವೇಳೆ ಏಕಾಏಕಿ ಸಿಡಿಲು ಸಹಿತ ಮಳೆ ಆರಂಭವಾಗಿ ಜಮೀನಿನಲ್ಲಿದ್ದ ರಾಹುಲ್‌ಗೆ ಸಿಡಿಲು ಬಡಿದು ದುರಂತ ಸಂಭವಿಸಿದೆ. ಇದನ್ನೂ ಓದಿ: ದುಪ್ಪಟ್ಟು ದರಕ್ಕೆ ಸಿಲಿಂಡರ್ ಮಾರುತ್ತಿದ್ದ ಅಡ್ಡೆ ಮೇಲೆ ಪೊಲೀಸರಿಂದ ದಾಳಿ – 9 ಸಿಲಿಂಡರ್ ಜಪ್ತಿ
ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಯುವಕನ ಸಾವಿನಿಂದ ಪೋಷಕರು ಕಂಗಾಲಾಗಿದ್ದಾರೆ. ಬೀದರ್, ಔರಾದ್, ಭಾಲ್ಕಿ ಸೇರಿದಂತೆ ಮುಂಜಾನೆ ಹಲವೆಡೆ ಮಳೆಯಾಗಿದೆ. ಘಟನಾ ಸ್ಥಳಕ್ಕೆ ಪೋಲಿಸರು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಾಲ್ತಾರೆ ಅರಣ್ಯ ಮಾರ್ಗದಲ್ಲಿ ಹುಲಿ ದರ್ಶನ – ಪ್ರವಾಸಿಗರು ಫುಲ್ ಖುಷ್

