ನವದೆಹಲಿ: ಭಾರತ-ದಕ್ಷಿಣ ಆಫ್ರಿಕಾ (IND vs SA) ನಡುವಣ ಹೈವೋಲ್ಟೇಜ್ ಪಂದ್ಯದ ಸಂದರ್ಭದ ಜೋಶ್ ಒಂದೆಡೆಯಾದ್ರೆ, ಹುಟ್ಟುಹಬ್ಬದಂದೇ ಕಿಂಗ್ ಕೊಹ್ಲಿ (Virat Kohli) ಶತಕ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಸರಿಗಟ್ಟುತ್ತಾರಾ ಎಂಬ ಕೌತುಕ ಮತ್ತೊಂದೆಡೆ. ಎರಡೆರಡು ನಿರೀಕ್ಷೆಗಳನ್ನಿಟ್ಟುಕೊಂಡು ನ.5 ರಂದು ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣದತ್ತ ಧಾವಿಸಿದ್ದರು. ಕೋಟ್ಯಂತರ ಅಭಿಮಾನಿಗಳು ತಾವಿದ್ದಲ್ಲೇ ಭಾರತ ತಂಡದ ಗೆಲುವಿಗಾಗಿ ಪ್ರಾರ್ಥಿಸಿದ್ದರು.
ಇತ್ತ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಉಭಯ ತಂಡಗಳು ಸೆಣಸಲು ತಯಾರಾಗಿದ್ದವು. ಈ ಮಧ್ಯೆ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ವೀಡಿಯೋವೊಂದು ವೈರಲ್ ಆಗಿದೆ. ಈಚೆಗೆ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದ ಸಂದರ್ಭದ ವೀಡಿಯೋ ಇದು ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಇದನ್ನೂ ಓದಿ: ಸಚಿನ್ 49 = ವಿರಾಟ್ 49 : ಯಾವ ದೇಶದಲ್ಲಿ ಎಷ್ಟು ಶತಕ..?
Goosebumps Moment for Every Viratian????❤️#viratkohli #HappyBirthdayViratKohli pic.twitter.com/ccTZSTVWg1
— ???????????????????????? (@wrogn_edits) November 5, 2023
ವೀಡಿಯೋದಲ್ಲಿ, ಭಾರತದ ಕ್ರಿಕೆಟ್ ಪಡೆ ಸ್ಟೇಡಿಯಂನಿಂದ ಹೊರಡುತ್ತಿತ್ತು. ಈ ವೇಳೆ ಹುಡುಗ ಅಭಿಮಾನಿಯೊಬ್ಬ ಮೈದಾನದಲ್ಲಿ ಓಡಿ ಬರುತ್ತಾನೆ. ಬಂದವನೇ ವಿರಾಟ್ ಕೊಹ್ಲಿ ಕಾಲಿಗೆರಗಲು ಮುಂದಾಗುತ್ತಾನೆ. ಇದರಿಂದ ಶಾಕ್ ಆದ ಕೊಹ್ಲಿ, ಹುಡುಗನ ಕೈಗಳನ್ನು ಹಿಡಿದುಕೊಳ್ಳುತ್ತಾರೆ. ಯುವ ಅಭಿಮಾನಿಯ ಇಂಗಿತವನ್ನು ಅರಿತ ಕೊಹ್ಲಿ ಶೇಕ್ಹ್ಯಾಂಡ್ ಕೊಡುತ್ತಾರೆ. ಕಾಲನ್ನು ಮುಟ್ಟಬೇಡಪ್ಪ ಎಂದು ಅಭಿಮಾನಿಗೆ ಹೇಳುತ್ತಾರೆ.
ದೃಶ್ಯದ ವೀಡಿಯೋ ಕೊಹ್ಲಿ ಹುಟ್ಟುಹಬ್ಬದಂದು ವೈರಲ್ ಆಗಿದೆ. ಆ ಮೂಲಕ ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದರು. 35ನೇ ವಸಂತಕ್ಕೆ ಕಾಲಿಟ್ಟಿರುವ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಅಂತರರಾಷ್ಟ್ರೀಯ ಶತಕಗಳ ದಾಖಲೆಯನ್ನು ಸರಿಗಟ್ಟುವ ದಿನ ಇದಾಗಿತ್ತು. ಇದನ್ನೂ ಓದಿ: 49th Century: ಕಿಂಗ್ ಕೊಹ್ಲಿ ಬರ್ತ್ ಡೇ ಶತಕ – ಶುಭಾಶಯಗಳ ಸುರಿಮಳೆ!
ಈಗಾಗಲೇ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ನಲ್ಲಿ ಎರಡು ಶತಕಗಳಿಂದ ಕೊಹ್ಲಿ ವಂಚಿತರಾಗಿದ್ದರು. ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ಕೊಹ್ಲಿ ಕ್ರಮವಾಗಿ 95 ಮತ್ತು 88 ರನ್ ಗಳಿಸಿ ಔಟಾಗಿದ್ದರು. ಇದನ್ನೂ ಓದಿ: ICC World Cup: 20 ವರ್ಷಗಳ ಬಳಿಕ ಟೀಂ ಇಂಡಿಯಾದ ಸತತ 8ನೇ ಗೆಲುವು
ಆದರೆ ನ.5 ರಂದು ಕೊಹ್ಲಿ ಅಭಿಮಾನಿಗಳ ಆಸೆ ಈಡೇರಿದೆ. ಫ್ಯಾನ್ಸ್ ಪ್ರಾರ್ಥನೆಯಂತೆ ಕೊಹ್ಲಿ ತಮ್ಮ ಹುಟ್ಟುಹಬ್ಬದಂದೇ ಆಫ್ರಿಕಾ ವಿರುದ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಜೊತೆಗೆ ಸಚಿನ್ ತೆಂಡೂಲ್ಕರ್ ಶತಕದ ದಾಖಲೆಯನ್ನು ಸರಿಗಟ್ಟಿದ್ದಾರೆ.