ಬೆಂಗಳೂರು: ಖಾಸಗಿ ಕಂಪನಿಯ ಕಿರುಕುಳಕ್ಕೆ ಬೇಸತ್ತ ಯುವ ಉದ್ಯೋಗಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತೇಜಸ್ ಕುಮಾರ್(23) ನೇಣಿಗೆ ಶರಣಾದ ಯುವಕ. ಚನ್ನಪಟ್ಟಣದ ಅಲ್ಲಾಳಸಂದ್ರ ಮೂಲದ ತೇಜಸ್ ಕುಮಾರ್ ಜಿಗಣಿಯ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡು ಇಲ್ಲಿಯೇ ನೆಲೆಸಿದ್ದರು.
Advertisement
ಹದಿನೈದು ದಿನಗಳ ಹಿಂದೆ ತೇಜಸ್ ಕಂಪನಿಯನ್ನು ತೊರೆದು ಬೇರೆ ಕಂಪನಿಗೆ ಸೇರಿಕೊಂಡಿದ್ದರು. ಆ ಕಂಪನಿಯವರು ಹಿಂದಿನ ಕಂಪನಿಯ ರಿಲಿವಿಂಗ್ ಲೆಟರ್ ಕೇಳಿದ್ದರು. ಇದೇ ವಿಚಾರವಾಗಿ ಹಳೆಯ ಕಂಪೆನಿಯಲ್ಲಿ ಕೇಳಿದ್ದರು. ಆದರೆ ಕಂಪನಿಯ ಮಾನವ ಸಂಪನ್ಮೂಲ ವಿಭಾಗ ರಿಲಿವಿಂಗ್ ಲೆಟರ್ ಕೊಡಲು ನಿರಾಕರಿಸಿತ್ತು.
Advertisement
Advertisement
ಇದೇ ವಿಚಾರಕ್ಕೆ ಗಲಾಟೆ ಮಾಡಿ ಸ್ಥಳೀಯ ಮುಖಂಡರ ಜೊತೆಗೂಡಿ ಕಂಪನಿಗೆ ಹೋಗಿದ್ದರು. ಆದರೂ ತೇಜಸ್‍ಗೆ ರಿಲಿವಿಂಗ್ ಲೆಟರ್ ಕೊಡದ ಕಾರಣ ಮನನೊಂದು ಮನೆಯಲ್ಲಿ ಯಾರೂ ಇಲ್ಲದೇ ವೇಳೆ ನೇಣಿಗೆ ಶರಣಾಗಿದ್ದಾರೆ. ಇನ್ನು ಆತ್ಮಹತ್ಯೆ ಮಾಡುಕೊಳ್ಳವ ಮುನ್ನ ತಂದೆ-ತಾಯಿಗೆ ರಿಲಿವಿಂಗ್ ಲೆಟರ್ ನೀಡದ ಕಾರಣ ಸೂಸೈಡ್ ಮಾಡುತ್ತಿದ್ದೇನೆ ಎಂದು ಪತ್ರ ಬರೆದಿದ್ದಾರೆ.
Advertisement
ಈ ಬಗ್ಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.