Connect with us

Cinema

ಹಿಂದಿಯಲ್ಲಿ ಸನ್ನಿ ಲಿಯೋನ್ ಹೆಂಗೋ ಕನ್ನಡದಲ್ಲಿ ಸಂಯುಕ್ತಾ ಹೆಗಡೆ ಹಂಗೆ – ಯುವನಿರ್ದೇಶಕ ಕೀರ್ತನ್ ಶೆಟ್ಟಿ

Published

on

ಬೆಂಗಳೂರು: ಕಿರಿಕ್ ಬೆಡಗಿ ನಟಿ ಸಂಯುಕ್ತಾ ಹೆಗಡೆ ಕನ್ನಡದ ನೀಲಿ ತಾರೆ. ಹಿಂದಿಯಲ್ಲಿ ಸನ್ನಿ ಲಿಯೋನ್ ಹೆಂಗೋ ಕನ್ನಡದಲ್ಲಿ ಸಂಯುಕ್ತಾ ಹೆಗಡೆ ಹಂಗೆ. ಗಂಡುಬೀರಿ ಸಂಯುಕ್ತಾ ಹೀಗಂತ ಯುವ ನಿರ್ದೇಶಕ ಕೀರ್ತನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸಂಯುಕ್ತಾ ಹೆಗಡೆ ಒಬ್ಬ ಕೆಟ್ಟ ಹುಡುಗಿ, ಎಣ್ಣೆ, ಸಿಗರೇಟ್, ಗಾಂಜಾ, ಎಲ್ಲಾ ಚಟ ಇರುವ ಹುಡುಗಿ. ಅವಳಿಂದ ಚಿತ್ರರಂಗ ಹಾಳಾಗುತ್ತಿದೆ ಎಂದು ನಿರ್ದೇಶಕ ಕೀರ್ತನ್ ಶೆಟ್ಟಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ನನ್ನ ಮೀಟೂ ವಿತ್ ಫೈಟೂ ಚಿತ್ರದ ಕಥೆಯ ಗುಟ್ಟನ್ನು ದಯಮಾಡಿ ಚಿತ್ರ ಶೂಟಿಂಗ್ ಆಗಿ ಬಿಡುಗಡೆಯಾಗುವರೆಗೂ ಬಿಟ್ಟು ಕೊಡಲ್ಲ. ಎಲ್ಲೂ ಕಾಣಿಸಿಕೊಳ್ಳಲ್ಲ. ಚಿತ್ರದ ಶೂಟಿಂಗ್ ಹೆಚ್ಚಾಗಿ ಹೈದರಾಬಾದ್ ನಲ್ಲಿ ಮಾಡುವ ಪ್ಲಾನ್ ನಮ್ಮ ತಂಡದ್ದು. ಇವಾಗ ಎಲ್ರೂ ಕೇಳ್ತಾರೆ ಏನ್ ಕಥೆ ಅಂತ ಶೇ.100 ರಲ್ಲಿ ಶೇ.10 ನ್ನು ಹೇಳ್ತಾ ಇದ್ದೀನಿ. ಅದರಲ್ಲೂ ಶ್ರೀ ರೆಡ್ಡಿಯದ್ದು ಯಾವ ಪಾತ್ರ ಯಾರ ಪಾತ್ರ ಅಂತ ನಾನು ಖಂಡಿತ ಹೇಳಲ್ಲ.

ನನ್ನ ಚಿತ್ರದಲ್ಲಿ ಕಿರಿಕ್ ಹುಡುಗಿ ಬಜಾರಿ ಅಂತ ಹೆಸರುವಾಸಿಯಾದ ಗಂಡು ಬೀರಿ ಸಂಯುಕ್ತ ಹೆಗ್ಡೆ ತರಹದ ಒಂದು ಪಾತ್ರ ಇದೆ. ಆ ಪಾತ್ರವನ್ನು ಇವಾಗ ಬಿಗ್ ಬಾಸ್ ಮನೆಯಲ್ಲಿರುವ ಸೋನು ಪಾಟೀಲ್ ಅವರು ಹೊರಗಡೆ ಬಂದಾಗ ಅವರತ್ರ ಮಾತಾಡಿ ಅವರತ್ರ ಮಾಡಿಸುವ ಪ್ಲಾನ್ ನಮ್ಮದ್ದು. ಸೋನು ಪಾಟೀಲ್ ನನಗೆ ವೈಯಕ್ತಿಕವಾಗಿ ಗೊತ್ತಿರುವ ಹುಡುಗಿ. ಇನ್ನುಳಿದ ಗುಟ್ಟನ್ನು ಸಮಯ ಬಂದಾಗ ನಾನೇ ಬಿಟ್ಟು ಕೊಡುವೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಸಂಯುಕ್ತ ಹೆಗ್ಡೆ ಒಬ್ಬಳು ಕೆಟ್ಟ ಹುಡುಗಿ ಅವಳಿಗೆ ಎಣ್ಣೆ, ಗಾಂಜಾ, ಸಿಗರೇಟ್ ಎಲ್ಲಾ ಕೆಟ್ಟ ಚಟ ಇರುವ ಹುಡುಗಿ ಅಂಥವರಿಂದ ನಮ್ಮ ಚಿತ್ರರಂಗ ಹಾಳಾಗುತ್ತಿದೆ. ದಯಮಾಡಿ ನನ್ನ ಚಿತ್ರದಲ್ಲಿ ಯಾವುದೇ ಕೆಟ್ಟ ಸಂದೇಶ ಇಲ್ಲ ಚಿತ್ರರಂಗವನ್ನು ಉಳಿಸುವ ಪ್ರಯತ್ನ ಮತ್ತು ನಿಜವಾದ ಕಥೆಯಾದರಿತ ಸಿನಿಮಾ. ಸಂಯುಕ್ತ ಹೆಗ್ಡೆ ಕನ್ನಡದ ನೀಲಿ ತಾರೆ ಹಿಂದಿಯಲ್ಲಿ ಸನ್ನಿ ಲಿಯೋನ್ ಹೆಂಗೊ ಕನಾ9ಟಕದಲ್ಲಿ ಸಂಯುಕ್ತ ಹೆಗ್ಡೆ ಹಂಗೆ. ಗಂಡು ಬೀರಿ ಸಂಯುಕ್ತ ಎಂದು ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ಬಗ್ಗೆ ಕೀರ್ತನ್ ಶೆಟ್ಟಿ ಅವರನ್ನು ಪಬ್ಲಿಕ್ ಟಿವಿ ಪ್ರಶ್ನಿಸಿದ್ದಾಗ ಅವರು ಇದು ಸಂಯುಕ್ತ ಕತೆ ಅಲ್ಲ. ಇದು ಮೀಟೂ ಕತೆ. ನನ್ನ ಸಿನಿಮಾದಲ್ಲಿ ಸಂಯುಕ್ತ ತರಹದ ಬಜಾರಿ ಪಾತ್ರ ಇದೆ ಎಂದು ಹೇಳಿದ್ದೇನೆ ಹೊರತು ಸಂಯುಕ್ತ ಬಗ್ಗೆ ಎಲ್ಲಿಯೂ ಕೆಟ್ಟದಾಗಿ ಏನೂ ಬರೆದುಕೊಂಡಿಲ್ಲ ಎಂದು ಕೀರ್ತನ್ ಸ್ಪಷ್ಟನೆ ನೀಡಿದ್ದಾರೆ. ಈ ಪೋಸ್ಟ್ ಬಗ್ಗೆ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಕೀರ್ತನ್ ಶೆಟ್ಟಿ ತಮ್ಮ ಫೇಸ್‍ಬುಕ್ ನಿಂದ ಈ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *